ಶಾಹೀನ್ ಬೀದರ್: ಯುಪಿಎಸ್‌ಸಿ ತರಬೇತಿ ಜೊತೆ ಪದವಿ; ಅರ್ಹರಿಗೆ 100 ಶೇ. ವರೆಗೆ ವಿದ್ಯಾರ್ಥಿ ವೇತನ

Update: 2020-11-23 08:25 GMT

ಬೀದರ್, ನ.23: ಇಲ್ಲಿನ ಶಾಹಿನ್ ಮಹಿಳಾ ಪದವಿ ಕಾಲೇಜಿನಲ್ಲಿ ಬಿಎ, ಮತ್ತು ಬಿಎಸ್ಸಿ ಪದವಿ ತರಗತಿಗಳ ಪ್ರವೇಶಾತಿ ನೋಂದಣಿ ಅವಧಿಯನ್ನು ನ.30ರವರೆಗೆ ವಿಸ್ತರಿಸಲಾಗಿದೆ.

ಬಿಎ ಮತ್ತು ಬಿಎಸ್ಸಿ ಎರಡೂ ಕೂಡಾ ಯುಪಿಎಸ್‌ಸಿ ಕೋರ್ಸ್‌ನೊಂದಿಗೆ ಸಂಯೋಜಿತವಾಗಿವೆ. ಬಿಎಯಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ/ಸಮಾಸಶಾಸ್ತ್ರ ವಿಷಯಗಳ ಸಂಯೋಜನೆಯಿದ್ದರೆ, ಬಿಎಸ್ಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ವಿಷಯಗಳಿವೆ.

ವಿದ್ಯಾರ್ಥಿ ವೇತನ ಸೌಲಭ್ಯ: ಪದವಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯರಿಗೆ 12ನೇ ತರಗತಿ ಅಥವಾ ದ್ವಿತೀಯ ಪಿಯುಸಿಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಬೋಧನಾ ಶುಲ್ಕ ಮತ್ತು ವಸತಿ ವಿದ್ಯಾರ್ಥಿ ವೇತನ ಸೌಲಭ್ಯವನ್ನು ಸಂಸ್ಥೆಯು ನೀಡಲಿದೆ. ಇದು ಸೀಮಿತ ಅವಕಾಶವಾಗಿರುತ್ತದೆ.

70 ಶೇ. ಮತ್ತು ಅದಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿಯರು 70 ಶೇ. ವಿದ್ಯಾರ್ಥಿ ವೇತನ(ಬೋಧನಾ ಶುಲ್ಕ ಮತ್ತು ಹಾಸ್ಟೆಲ್ ಶುಲ್ಕ ಸೇರಿ) ಪಡೆಯಲಿದ್ದಾರೆ. ಅದೇರೀತಿ 80 ಶೇ. ಮತ್ತು ಅಧಿಕ ಅಂಕ ಗಳಿಸಿದವರು 75 ಶೇ. ವಿದ್ಯಾರ್ಥಿ ವೇತನ, 85 ಶೇ. ಮತ್ತು ಅಧಿಕ ಅಂಕ ಗಳಿಸಿದವರು 80 ಶೇ. ವಿದ್ಯಾರ್ಥಿ ವೇತನ ಹಾಗೂ 90 ಶೇ. ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿನಿಯರಿಗೆ 100 ಶೇ. ವಿದ್ಯಾರ್ಥಿ ವೇತನ ಲಭಿಸಲಿದೆ.

ಶಾಹಿನ್ ಮಹಿಳಾ ಪದವಿ ಕಾಲೇಜು ಅನುಭವಿ ಬೋಧಕ ಸಿಬ್ಬಂದಿ, ಅತ್ಯುತ್ತಮ ಗ್ರಂಥಾಲಯ, ಸುಸಜ್ಜಿತ ಪ್ರಯೋಗಾಲಯವನ್ನು ಹೊಂದಿದೆ. ಅದೇರೀತಿ 24/7 ಸೆಕ್ಯುರಿಟಿ ವ್ಯವಸ್ಥೆ ಹೊಂದಿರುವ ಎಸಿ/ಎಸಿ ರಹಿತ ಸೌಲಭ್ಯಗಳ ವಸತಿ ಕೂಡಾ ಇದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿನಿಯರು ತಮ್ಮ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಮೊ.ಸಂ.: 8197077682ಕ್ಕೆ ಎಸ್ಸೆಮ್ಮೆಸ್ ಮಾಡಬಹುದು. ಸಂಸ್ಥೆಯ ವೆಬ್‌ಸೈಟ್ www.shaheengroup.org ಸಂದರ್ಶಿಸಬಹುದು. ಅಥವಾ ಟೋಲ್ ಫ್ರಿ ಸಂಖ್ಯೆ 18001216235ಗೂ ಕರೆ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News