ಕೊರೋನ ಯೋಧನ ಕುಟುಂಬಕ್ಕೆ ಪರಿಹಾರ ವಿತರಣೆ ಕಾರ್ಯಕ್ರಮ ವಿಳಂಬ: ಅಸಮಾಧಾನ ಹೊರಹಾಕಿದ ಮೇಯರ್ ತಸ್ನೀಂ

Update: 2020-11-23 16:02 GMT

ಮೈಸೂರು,ನ.23: ಮೃತ ಕೊರೋನ ವಾರಿಯರ್ಸ್ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ ಬಹಿರಂಗ ಅಸಮಾಧಾನ ಹೊರ ಹಾಕಿದರು.

ಪಾಲಿಕೆಯ ಜಯ ಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೊರೋನದಿಂದ ಮೃತಪಟ್ಟ ಪೌರಕಾರ್ಮಿಕರ ಕುಟುಂಬಕ್ಕೆ ತಲಾ 30 ಲಕ್ಷ ರೂ. ಪರಿಹಾರ ಚೆಕ್ ನೀಡುವ ಕಾರ್ಯಕ್ರಮ ಇದಾಗಿತ್ತು. ಆದರೆ ಕಾರ್ಯಕ್ರಮ ವಿಳಂಬವಾದ ಹಿನ್ನೆಲೆಯಲ್ಲಿ ಪರಿಹಾರ ಹಣ ಸ್ವೀಕರಿಸಲು ಬಂದಿದ್ದ ಕೊರೋನ ವಾರಿಯರ್ಸ್ ಕುಟುಂಬ ಕಾದು ಕಾದು ಸುಸ್ತಾದ ಘಟನೆ ನಡೆಯಿತು.

ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮ ವಿಳಂಬವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರೋಟೋಕಾಲ್ ಅನುಸರಿಸಿಲ್ಲವೆಂದು ಮೇಯರ್ ತಸ್ನೀಂ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದರು. ಕಾರ್ಯಕ್ರಮ ವಿಳಂಬ ಆಗಲು ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಜಿಲ್ಲಾ ಮಟ್ಟದಲ್ಲಿ ಅವಮಾನ ಆಗಿತ್ತು. ಈಗ ಪಾಲಿಕೆಯಲ್ಲಿ ಮೂರನೇ ಬಾರಿ ಆಗಿದೆ. ಅರೋಗ್ಯ ಇಲಾಖೆಯಲ್ಲಿ ಅಧಿಕಾರಿಗಳು ಇದ್ದರೂ ಕಾರ್ಯಕ್ರಮದ ಮಾಹಿತಿ ನೀಡಿಲ್ಲ. ನಮಗೆ ಕಂಟ್ರೋಲ್ ರೂಂ ನಿಂದ ಮಾಹಿತಿ ಬರುತ್ತೆ. ಇನ್ನು ಮುಂದೆ ಈ ರೀತಿ ಅವಮಾನ ಸಹಿಸಲ್ಲ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು. ಹೀಗಾಗಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಹಿರಂಗವಾಗಿ ಪಾಲಿಕೆ ಆಯುಕ್ತರಿಗೆ ಮೇಯರ್ ತಸ್ನೀಂ ಸೂಚನೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News