ಸಿಗಂದೂರು ದೇವಾಲಯ ಮುಜರಾಯಿ ಇಲಾಖೆಗೆ ಸೇರಿಸುವ ವಿಚಾರ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-11-23 16:17 GMT

ಬೆಂಗಳೂರು, ನ.23: ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಸಂಬಂಧ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸರಕಾರ ರಚಿಸಿರುವ ಮೇಲುಸ್ತುವಾರಿ ಹಾಗೂ ಸಲಹಾ ಸಮಿತಿಯನ್ನು ರದ್ದುಗೊಳಿಸಿ ಎಂದು ನಡೆಯುತ್ತಿರುವ ಹೋರಾಟದ ಮಧ್ಯೆಯೇ ಹೈಕೋರ್ಟ್ ದೇವಸ್ಥಾನವನ್ನ ಮುಜರಾಯಿಗೆ ಸೇರಿಸುವ ಕುರಿತು ಸರಕಾರಕ್ಕೆ ನೋಟಿಸ್ ನೀಡಿದೆ.

ಸಾಗರ ತಾಲೂಕಿನ ತುಮರಿ ನಿವಾಸಿ ಲಕ್ಷ್ಮಿನಾರಾಯಣ ಎಂಬುವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದು, ದೇವಸ್ಥಾನದ ನಿರ್ಮಾಣದ ವೇಳೆ ಹಾಗೂ ತದನಂತರದ ಅಭಿವೃದ್ಧಿಯಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಹಾಗೂ ದೇವಸ್ಥಾನದಲ್ಲಿ ಬರುವ ಆದಾಯಗಳಿಗೆ ಪಾರದರ್ಶಕತೆ ತರುವ ಸಲುವಾಗಿ ಮುಜರಾಯಿ ಇಲಾಖೆಗೆ ಸೇರಿಸುವಂತೆ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News