ಹಂಪಿ ಸ್ಮಾರಕಗಳಲ್ಲಿ ನಿಯಮ ಉಲ್ಲಂಘಿಸಿ ಪ್ರೀ ವೆಡ್ಡಿಂಗ್ ಶೂಟ್: ಪುರಾತತ್ವ ಇಲಾಖೆಯಿಂದ ಕ್ರಮ

Update: 2020-11-23 17:30 GMT

ಹೊಸಪೇಟೆ, ನ.23: ಪ್ರೀ ವೆಡ್ಡಿಂಗ್ ಶೂಟ್ ಹೆಸರಲ್ಲಿ ಹಂಪಿ ಸ್ಮಾರಕಗಳಲ್ಲಿ ನಿಯಮ ಉಲ್ಲಂಘನೆ ಮಾಡಿದ್ದ ಜೋಡಿಗಳ ವಿರುದ್ಧ ಭಾರತೀಯ ಪುರಾತತ್ವ ಇಲಾಖೆ ಪ್ರಕರಣ ದಾಖಲಿಸಲು ಮುಂದಾಗಿದೆ.

ಇತ್ತೀಚೆಗೆ ಆಂಧ್ರಪ್ರದೇಶ ಮೂಲದ ನವ ಜೋಡಿಗಳಾದ ಜಾಹ್ನವಿ ಮತ್ತು ಸಿದ್ದಾರ್ಥ ಎಂಬುವವರು ಹಂಪಿ ಸ್ಮಾರಕಗಳ ಬಳಿ ಪ್ರೀ ವೆಡ್ಡಿಂಗ್ ಶೂಟ್ ನಡೆಸಿದ್ದಾರೆ. ಕಮಲ್ ಮಹಲ್, ವಿಜಯ ವಿಠ್ಠಲ ದೇವಸ್ಥಾನ, ಸಪ್ತಸ್ವರ ಮಂಟಪ(ಕಲ್ಲಿನಲ್ಲಿ ಸರಿಗಮಪ ಬರೋ ಮಂಟಪ) ಸ್ಮಾರಕಗಳಲ್ಲಿ ನಿಯಮದ ಪ್ರಕಾರ ಶೂಟಿಂಗ್ ನಡೆಸುವಂತಿಲ್ಲ. ಆದರೆ, ಈ ಜೋಡಿ ಅಲ್ಲಿ ಬಿಂದಾಸ್ ಆಗಿ ಓಡಾಡಿದ್ದಾರೆ, ವಿಡಿಯೋ ಶೂಟಿಂಗ್ ಮಾಡಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆಯ ಹಂಪಿ ವೃತ್ತದ ಉಪ ಅಧೀಕ್ಷಕ ಕಾಳಿಮುತ್ತು ಅವರು, ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಸಲು ಅನುಮತಿಯನ್ನು ಪಡೆದುಕೊಂಡಿಲ್ಲ. ನಿಯಮ ಉಲ್ಲಂಘಿಸಿರುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News