ಎಪಿಎಲ್ ಪಡಿತರ ಚೀಟಿ ಪಡೆದುಕೊಳ್ಳಲು ಆಹಾರ ಇಲಾಖೆ ಸೂಚನೆ

Update: 2020-11-24 18:12 GMT

ಬೆಂಗಳೂರು, ನ.24: ಸರಕಾರ ನೀಡುವ ಸೌಲಭ್ಯಗಳಿಂದ ವಂಚಿತರಾಗದಿರಲು ರಾಜ್ಯದ ಎಲ್ಲ ಕುಟುಂಬಗಳು ಪಡಿತರ ಚೀಟಿ ಹೊಂದುವುದು ಅತ್ಯವಶ್ಯವಾಗಿದೆ. ರಾಜ್ಯದ 5.35 ಕೋಟಿ ನಾಗರಿಕರ ಬಳಿ ಕುಟುಂಬ ಪಡಿತರ ಚೀಟಿ ಗುರುತಿನ ಸಂಖ್ಯೆ ಲಭ್ಯವಿರುತ್ತದೆ. ಉಳಿದ ನಾಗರಿಕರು ಪ್ರಮುಖವಾಗಿ ನಗರ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಮೇಲ್ಪಟ್ಟ ಕುಟುಂಬಗಳ ಬಳಿ ಪಡಿತರ ಚೀಟಿ ಲಭ್ಯವಿಲ್ಲದಿರುವ ಸಾಧ್ಯತೆ ಇರುತ್ತದೆ.

ಬಡತನ ರೇಖೆಗಿಂತ ಮೇಲ್ಪಟ್ಟ ಕುಟುಂಬಗಳು ಪಡಿತರ ಚೀಟಿ ಹೊಂದಿಲ್ಲದೆ ಇದ್ದರೆ, ಆದ್ಯತೇತರ- ಎಪಿಎಲ್ ಪಡಿತರ ಚೀಟಿ ಪಡೆದುಕೊಳ್ಳಲು ಆಹಾರ ಇಲಾಖೆಯ ಅಂತರ್ಜಾಲ ತಾಣ http://ahara.kar.nic.in ಅಥವಾ ಸೇವಾ ಸಿಂಧು ಜಾಲತಾಣ http://sevasindhu.karnataka.gov.in  ಮೂಲಕ ಆಧಾರ್ ಸಂಖ್ಯೆಗೆ ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿ ಸ್ವಯಂಚಾಲಿತ ಅರ್ಜಿ ಸಲ್ಲಿಸಿ ಆದ್ಯತೇತರ ಪಡಿತರ ಚೀಟಿಯನ್ನು ನಿಯಮಾನುಸಾರ ಪಡೆದುಕೊಳ್ಳಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News