ಟಿಆರ್ ಪಿ ಹಗರಣ: ಪ್ರಿಯಾ ಮುಖರ್ಜಿಗೆ ಪ್ರಯಾಣ ಜಾಮೀನು ನೀಡಿ ಹೈಕೋಟ್೯ ಆದೇಶ

Update: 2020-11-25 18:00 GMT

ಬೆಂಗಳೂರು, ನ.25: ಟಿಆರ್ ಪಿ ಹಗರಣದಲ್ಲಿ ಬಂಧನ ಭೀತಿಯಲ್ಲಿರುವ ರಿಪಬ್ಲಿಕ್ ಟಿವಿ ವಾಹಿನಿ ಒಡೆತನದ ಎಆರ್ ಜಿ ಔಟ್‌ ಲೈರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾ ಮುಖರ್ಜಿ ಅವರಿಗೆ 20 ದಿನಗಳ ಕಾಲ ನಿರೀಕ್ಷಣಾ ಪ್ರಯಾಣ ಜಾಮೀನು ನೀಡಿ ಹೈಕೋಟ್೯ ಆದೇಶಿಸಿದೆ.

ಪ್ರಯಾಣ ಜಾಮೀನು ಕೋರಿ ಪ್ರಿಯಾ ಮುಖರ್ಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ  ಎಚ್.ಪಿ.ಸಂದೇಶ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.

ಅನಾರೋಗ್ಯ ಪೀಡಿತ ತಂದೆಯನ್ನು ಕಾಣಲು ಬೆಂಗಳೂರಿಗೆ ಬಂದಿರುವ ಪ್ರಿಯಾ ಅವರಿಗೆ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂದು ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ.

ಈಗಾಗಲೇ ವಿಚಾರಣೆಗೆ ಹಾಜರಾಗಿ ವಿವರಣೆ ನೀಡಿದ್ದರೂ ಮುಂಬೈ ಪೊಲೀಸರು ಮತ್ತೆ ಎರಡು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಹೀಗಾಗಿ, ಪ್ರಯಾಣ(ಟ್ರಾನ್ಸಿಟ್) ಜಾಮೀನು ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದ್ದರು. ನ್ಯಾಯಪೀಠವು ಪ್ರಯಾಣ ಜಾಮೀನು ನೀಡಿ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News