ಚಿಕ್ಕಮಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಚೆ ನೌಕರರಿಂದ ಧರಣಿ

Update: 2020-11-26 12:15 GMT

ಚಿಕ್ಕಮಗಳೂರು, ನ.26: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಅಂಚೆ ನೌಕರರ ಸಂಘದಿಂದ ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗ ಧರಣಿ ನಡೆಸಲಾಯಿತು.

ಗುರುವಾರ ನಗರದ ಆಜಾದ್ ಪಾರ್ಕ್ ವೃತ್ತದ ಸಮೀಪದಲ್ಲಿರುವ ಪ್ರಧಾನ ಅಂಚೆ ಕಚೇರಿ ಮುಂಭಾಗ ಧರಣಿ ನಡೆಸಿದ ಸಂಘದ ಸದಸ್ಯರು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಅಂಚೆ ನೌಕರರನ್ನು 1977ರ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಅಂಚೆ ಇಲಾಖೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು. ನೌಕರರಿಗೆ ಮೂರು ಇಂಕ್ರಿಮೆಂಟ್ ನೀಡುವುದರೊಂದಿಗೆ ಟೈಂಬಾಂಡ್ ಪ್ರಮೋಷನ್ ನೀಡಬೇಕು. 180 ದಿನಗಳ ರಜಾ ಸಹಿತ ವೇತನ ನೀಡಬೇಕೆಂದು ಆಗ್ರಹಿಸಿದರು.

ಗ್ರಾಮೀಣ ನೌಕರಿಗೆ ಇಲಾಖೆ ನೌಕರರಿಗೆ ನೀಡುವ ವೈದ್ಯಕೀಯ ಭತ್ಯೆ ನೀಡಬೇಕು. ತಡೆ ಹಿಡಿದಿರುವ ತುಟ್ಟಿಭತ್ಯೆಯನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಹಬ್ಬದ ದಿನಗಳಲ್ಲಿ ಮುಂಗಡ ಹಣ ಪಾವತಿ ಮಾಡಬೇಕು. ರದ್ದುಪಡಿಸಿರುವ ಕಂಬೈಡ್ ಡ್ಯೂಟಿ ಅಲೆವೆನ್ಸ್ ವೇತನ ಜೊತೆಗೆ ತಡೆಹಿಡಿದಿರುವ ಬಾಕಿ ಹರಿಯರ್ಸ್ ನೀಡಬೇಕು. ತಿಂಗಳ ವೇತನದಲ್ಲಿ ಕಡಿತಗೊಳಿಸಿರುವ ಗ್ರೂಪ್ ಇನ್ಸುರೆನ್ಸ್ ಹಣ ಪಾವತಿ ಮಾಡಬೇಕು. ಟಾರ್ಗೆಟ್ ಮಾದರಿಯನ್ನು ತೆಗೆದುಹಾಕಬೇಕು. ಭದ್ರತಾ ಠೇವಣಿಗಾಗಿ ಪಡೆದಿರುವ ಹಣವನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದರು.

ಧರಣಿಯಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಜೊಸೆಫ್ ಬರೆಟೊ, ಕಾರ್ಯದರ್ಶಿ ಅಸ್ಲಾಂ ಅಹಮ್ಮದ್, ಖಜಾಂಚಿ ಮಂಜ ನಾಯಕ್, ಶೇಷನ್‍ಗೌಡ, ಟಿ.ಹನುಮಂತಪ್ಪ, ಮಂಜು, ರಾಮೇಗೌಡ, ವಿರೂಪಾಕ್ಷ, ಮಂಜುನಾಥ್, ಸುರೇಶ್, ವೈ.ಯು.ಗಾಂಗಾಧರ್, ಚಂದ್ರಪ್ರಕಾಶ್, ಗಡೇಹಳ್ಳಿ ಮಂಜಪ್ಪ, ಮಂಜುನಾಥ್, ಕೊಪ್ಪ ರಫೀಕ್, ಪ್ರವೀಣ್, ಗಜಲಿಂಗಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News