ಹಿರಿಯ ಸಾಹಿತಿ ದೇಶಾಂಶ ಹುಡಗಿ ನಿಧನ

Update: 2020-11-26 14:25 GMT

ಬೀದರ್, ನ.26: ಹಿರಿಯ ಸಾಹಿತಿ ದೇಶಾಂಶ ಹುಡಗಿ (ಶಾಂತಪ್ಪ ಶರಣಪ್ಪ ದೇವರಾಯ) ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ.

ರಂಗಭೂಮಿ, ಸಂಗೀತ ಮತ್ತು ಪರಿಸರ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ದೇಶಾಂಶ ಹುಡಗಿ, ಉತ್ತಮ ಕೊಳಲು ವಾದಕರು, ಗೀಗೀ ಪದ, ಜೋಗುಳ, ತತ್ವಪದ, ಮೋಹರಂ ಪದಗಳನ್ನು ನಾಡಿನಲ್ಲಿ ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಕನ್ನಡವೂ ಒಳಗೊಂಡಂತೆ ಉರ್ದು, ಮರಾಠಿ ಬಹುಭಾಷೆಯಲ್ಲಿ ಪ್ರಭುತ್ವ ಸಾಧಿಸಿದ್ದರು.

ಹನಿಗವನ, ಚೌಪದಿ ಕಾವ್ಯ, ಗ್ರಂಥ ಸಂಪಾದನೆ, ಅನುವಾದ, ಕಾವ್ಯ, ವ್ಯಕ್ತಿಚಿತ್ರಗಳು, ಆಧುನಿಕ ವಚನಗಳು ಸೇರಿ ವಿವಿಧ ಸಾಹಿತ್ಯದ ಪ್ರಕಾರಗಳಲ್ಲಿ ಒಟ್ಟು 50ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಅವರು, ಧರಿನಾಡು ಕನ್ನಡ ಸಂಘದ ಕೇಂದ್ರ ಸಮಿತಿ ಬೀದರ್ ಘಟಕ ಅಧ್ಯಕ್ಷರಾಗಿದ್ದರು. ಇವರು ಅನುಭವಶ್ರೀ, ಕಾಯಕ ಸಮ್ಮಾನ, ಸುವರ್ಣ ಕನ್ನಡಿಗ, ಕಲ್ಯಾಣ ರತ್ನ, ಜಾನಪದ ತಜ್ಞ, ಕರುನಾಡು ಸಿರಿ ಗೌರವ-ಸಮ್ಮಾನಗಳಿಗೆ ಪಾತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News