ಪ್ರಥಮ ಪಿಯು ದಾಖಲಾತಿ ಅವಧಿ ವಿಸ್ತರಣೆ

Update: 2020-11-26 17:11 GMT

ಬೆಂಗಳೂರು, ನ.26: ಪ್ರಥಮ ಪಿಯುಸಿ ದಾಖಲಾತಿ ಮತ್ತು ಕಾಲೇಜು ಬದಲಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಂತಿಮ ದಿನಾಂಕವನ್ನು ಮಾ.12 ರವರೆಗೂ ವಿಸ್ತರಿಸಲಾಗಿದೆ.

ಪಿಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಾಖಲಾತಿ ಹಾಗೂ ಕಾಲೇಜುಗಳನ್ನು ಬದಲಿಸಿಕೊಳ್ಳಲು ನ.27 ರವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಪೋಷಕರು ಹಾಗೂ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಮತ್ತೊಂದು ಅವಕಾಶ ನೀಡಲಾಗಿದ್ದು, ಮಾ.12 ರವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News