ಪುತ್ರಿಗೆ ಗೃಹಬಂಧನ ವಿಧಿಸಿ, ನನ್ನನ್ನು ಅಕ್ರಮ ದಿಗ್ಬಂಧನದಲ್ಲಿರಿಸಲಾಗಿದೆ: ಮೆಹಬೂಬಾ ಮುಫ್ತಿ ಆರೋಪ

Update: 2020-11-27 17:19 GMT

ಶ್ರೀನಗರ್ : ತಮ್ಮನ್ನು ಮತ್ತೆ ‘ಅಕ್ರಮವಾಗಿ ದಿಗ್ಬಂಧನದಲ್ಲಿರಿಸಲಾಗಿದೆ' ಎಂದು ಆರೋಪಿಸಿರುವ ಪಿಡಿಪಿ ನಾಯಕಿ ಹಾಗೂ ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ತನ್ನ ಪುತ್ರಿ ಇಲ್ತಿಜಾರನ್ನು `ಗೃಹ ಬಂಧನದಲ್ಲಿರಿಸಲಾಗಿದೆ' ಎಂದೂ ದೂರಿದ್ದಾರೆ.

ಇತ್ತೀಚೆಗೆ ಎನ್‍ಐಎ ಬಂಧಿಸಿರುವ ಪಿಡಿಪಿ ಯುವ ಘಟಕದ ಅಧ್ಯಕ್ಷ ವಹೀದ್ ಪರ್ರ ಅವರ ಕುಟುಂಬವನ್ನು ಭೇಟಿಯಾಗಲು ತಮಗೆ ಅನುಮತಿ ನೀಡಲಾಗುತ್ತಿಲ್ಲ ಎಂದೂ ಮೆಹಬೂಬಾ ದೂರಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ನವೀದ್ ಬಾಬು ಜತೆ ನಂಟು ಹೊಂದಿದ್ದಾರೆಂಬ ಆರೋಪದ ಮೇಲೆ ಮೆಹಬೂಬಾ ಅವರ ಸಮೀಪವರ್ತಿಯಾಗಿರುವ ವಹೀದ್ ಅವರನ್ನು ಬಂಧಿಸಲಾಗಿದೆ.

“ನನ್ನನ್ನು ಮತ್ತೆ ಅಕ್ರಮವಾಗಿ ದಿಗ್ಬಂಧನದಲ್ಲಿರಿಸಲಾಗಿದೆ. ಕಳೆದ ಎರಡು ದಿನಗಳಿಂದ  ವಹೀದ್ ಅವರ ಕುಟುಂಬವನ್ನು ಪುಲ್ವಾಮಾದಲ್ಲಿ ಭೇಟಿಯಾಗಲು ಜಮ್ಮು ಕಾಶ್ಮೀರ ಆಡಳಿತ ನನಗೆ ಅನುಮತಿ ನಿರಾಕರಿಸುತ್ತಿದೆ. ಬಿಜೆಪಿ ಸಚಿವರು ಮತ್ತು ಅವರ ಕೈಗೊಂಬೆಗಳಿಗೆ ಕಾಶ್ಮೀರದ ಪ್ರತಿಯೊಂದು ಮೂಲೆಗೂ ತೆರಳಲು ಅನುಮತಿಯಿದೆ. ಆದರೆ ನನ್ನ ವಿಚಾರದಲ್ಲಿ ಮಾತ್ರ ಭದ್ರತೆ ಒಂದು ಸಮಸ್ಯೆಯಾಗಿದೆ'' ಎಂದು ಸರಣಿ ಟ್ವೀಟ್‍ಗಳ ಮೂಲಕ ಮೆಹಬೂಬಾ ಬರೆದಿದ್ದಾರೆ.

ವಹೀದ್ ಪರ್ರ ಅವರನ್ನು ‘ಆಧಾರರಹಿತ ಆರೋಪಗಳ' ಮೇಲೆ ಬಂಧಿಸಲಾಗಿದೆ ಎಂದು ಹೇಳಿರುವ ಮೆಹಬೂಬಾ  ತಮ್ಮ ಪುತ್ರಿ ಕೂಡ ವಹೀದ್ ಅವರ ಕುಟುಂಬವನ್ನು ಭೇಟಿಯಾಗಲು ಬಯಸಿದ್ದರಿಂದ ಆಕೆಯನ್ನೂ ಗೃಹಬಂಧನದಲ್ಲಿರಿಸಲಾಗಿದೆ ಎಂದು ಆರೋಪಿಸಿದ್ದಾರೆ.

‘‘ನನ್ನನ್ನು ಕಾನೂನು ಬಾಹಿರವಾಗಿ ಮತ್ತೊಮ್ಮೆ ವಶದಲ್ಲಿ ಇರಿಸಲಾಗಿದೆ. ಕಳೆದ ಎರಡು ದಿನಗಳಿಂದ ಜಮ್ಮು ಹಾಗೂ ಕಾಶ್ಮೀರ ಆಡಳಿತ ಪುಲ್ವಾಮದಲ್ಲಿರುವ ಪರ್ರಾ ವಾಹಿದ್ ಅವರ ಕುಟುಂಬದ ಭೇಟಿಗೆ ಅವಕಾಶ ನಿರಾಕರಿಸುತ್ತಿದೆ. ಬಿಜೆಪಿ ಸಚಿವರು ಹಾಗೂ ಅವರ ಕೈಗೊಂಬೆಗಳು ಕಾಶ್ಮೀರದ ಎಲ್ಲ ಕಡೆಗೆ ತೆರಳಲು ಅವಕಾಶ ನೀಡಲಾಗುತ್ತಿದೆ. ನನ್ನ ವಿಷಯದಲ್ಲಿ ಮಾತ್ರ ಭದ್ರತಾ ಸಮಸ್ಯೆ ಎದುರಾಗುತ್ತದೆ’’ ಎಂದು ಮೆಹಬೂಬಾ ಮುಫ್ತಿ ಶುಕ್ರವಾರ ಟ್ವೀಟ್ ಮಾಡಿದ್ದಾರೆ. ‘‘ಅವರ ಕ್ರೌರ್ಯಕ್ಕೆ ಯಾವುದೇ ಮಿತಿ ಇಲ್ಲ. ವಹೀದ್ ಅವರನ್ನು ಆಧಾರ ರಹಿತ ಆರೋಪದಲ್ಲಿ ಬಂಧಿಸಲಾಗಿದೆ. ನಾನು ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಕೂಡ ಅವಕಾಶ ನೀಡುತ್ತಿಲ್ಲ. ನನ್ನ ಪುತ್ರಿ ಇಲ್ತಿಜಾ ಅವರನ್ನು ಕೂಡ ಗೃಹ ಬಂಧನದಲ್ಲಿ ಇರಿಸಲಾಗಿದೆ. ಅವರು ಕೂಡ ವಹೀದ್ ಕುಟುಂಬವನ್ನು ಭೇಟಿಯಾಗಲು ಬಯಸಿದ್ದರು’’ ಎಂದು ಮುಫ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News