ನೈಋತ್ಯ ರೈಲ್ವೆಯಿಂದ ಹಬ್ಬದ ವಿಶೇಷ ರೈಲು ಸೇವೆ ಡಿಸೆಂಬರ್ ಅಂತ್ಯದವರೆಗೆ ವಿಸ್ತರಣೆ

Update: 2020-11-27 14:38 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.27: ನೈಋತ್ಯ ರೈಲ್ವೆ ವಲಯ ಅಕ್ಟೋಬರ್, ನವೆಂಬರ್ ನಲ್ಲಿ ಮೀಲಾದುನ್ನಬಿ, ದಸರಾ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ವಿವಿಧ ಸ್ಥಳಗಳಿಗೆ ಹಬ್ಬದ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಆರಂಭಿಸಿತ್ತು. ಇದೀಗ ಈ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರದ ಅವಧಿಯನ್ನು ಡಿಸೆಂಬರ್ ಅಂತ್ಯದವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಕೆಎಸ್‍ಆರ್ ಬೆಂಗಳೂರು-ಜೋಧಪುರ ನಡುವೆ ವಾರಕ್ಕೆ 2 ಬಾರಿ ಸಂಚಾರ ನಡೆಸುವ ರೈಲನ್ನು ಡಿ.30ರ ತನಕ ವಿಸ್ತರಣೆ ಮಾಡಲಾಗಿದೆ. ಜೋಧಪುರ-ಕೆಎಸ್‍ಆರ್ ಬೆಂಗಳೂರು ರೈಲನ್ನು 2021ರ ಜ.2ರತನಕ ವಿಸ್ತರಿಸಲಾಗಿದೆ.

ಮೈಸೂರು-ಅಜ್ಮೀರ್ ನಡುವೆ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ಹಬ್ಬದ ವಿಶೇಷ ರೈಲನ್ನು ಡಿ.31ರ ತನಕ ವಿಸ್ತರಣೆ ಮಾಡಲಾಗಿದೆ. ಅಜ್ಮೀರ್-ಮೈಸೂರು ನಡುವಿನ ರೈಲನ್ನು ಜ.3ರ ತನಕ ವಿಸ್ತರಣೆ ಮಾಡಲಾಗಿದೆ.

ಮೈಸೂರು-ಟ್ಯುಟಿಕಾರಿನ್ ಪ್ರತಿದಿನದ ರೈಲು, ಕೆಎಸ್‍ಆರ್ ಬೆಂಗಳೂರು-ಕನ್ಯಾಕುಮಾರಿ ಪ್ರತಿದಿನದ ರೈಲು, ಕನ್ಯಾಕುಮಾರಿ-ಕೆಎಸ್‍ಆರ್ ಬೆಂಗಳೂರು ಪ್ರತಿದಿನದ ರೈಲು, ಬೆಂಗಳೂರು ಕಂಟೋನ್ಮೆಂಟ್-ಭುವನೇಶ್ವರ ಮಂಗಳವಾರದ ರೈಲು, ಭುವನೇಶ್ವರ-ಬೆಂಗಳೂರು ಕಂಟೋನ್ಮೆಂಟ್ ರವಿವಾರದ ರೈಲನ್ನು ಸಹ ವಿಸ್ತರಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News