ಮರಗಳಿಗೆ ಮೊಳೆ ಹೊಡೆಯುವವರ ವಿರುದ್ಧ ಕ್ರಮಕ್ಕೆ ರಾಘವೇಂದ್ರ ಪೂಜಾರಿ ಒತ್ತಾಯ

Update: 2020-11-29 11:21 GMT

ಬೆಂಗಳೂರು, ನ. 29: ನಗರದಲ್ಲಿ ಮರಗಳಿಗೆ ಮೊಳೆ ಹಾಗೂ ಪಿನ್ ಹೊಡೆಯುವವರ ವಿರುದ್ದ ಸಂಬಂಧಿಸಿದ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿ-ಪ್ಯಾಕ್ ಸಂಯೋಜಕ ರಾಘವೇಂದ್ರ ಪೂಜಾರಿ ಒತ್ತಾಯಿಸಿದ್ದಾರೆ.

ರವಿವಾರ ಬಿ-ಪ್ಯಾಕ್ ವತಿಯಿಂದ ನಗರದಲ್ಲಿ ಮರಗಳಿಗೆ ಹೊಡೆದಿರುವ ಪಿನ್ ಹಾಗೂ ಮೊಳೆಗಳನ್ನು ತೆಗೆದು ಅದಕ್ಕೆ ಕನ್ನಡ ಬಾವುಟ ಹೊದಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನತೆಗೆ ಶುದ್ಧವಾದ ಗಾಳಿ ನೀಡುವಂತಹ ಮರ ಗಳಿಗೆ ಪಿನ್ ಮತ್ತು ಮೊಳೆ ಹೊಡೆಯುವುದು ಎಷ್ಟು ಸರಿಯೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಕೆಲವು ಉದ್ಯಮಿಗಳು ತಮ್ಮ ಸ್ವಾರ್ಥಕ್ಕಾಗಿ ತಮ್ಮ ವಸ್ತುಗಳನ್ನು ಪ್ರಚಾರ ಮಾಡುವುದಕ್ಕಾಗಿ ಮರಗಳಿಗೆ ಫಲಕಗಳನ್ನು ಅಂಟಿಸು ತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ನೋಡಿಯು ಮೌನ ವಹಿಸುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಮರಗಳಿಗೆ ಮೊಳೆ ಹೊಡೆಯುವವರನ್ನು ತಡೆದು ಅವರಿಗೆ ಅರಿವು ಮೂಡಿಸಬೇಕೆಂದು ಅವರು ಹೇಳಿದ್ದಾರೆ.

ಈ ವೇಳೆ ಸಿವಿಕ್ ಲೀಡರ್ಸ್‍ಗಳಾದ ವಾಸುದೇವ ಮೂರ್ತಿ, ಜಯರತ್ನ ಪುತಲಿಬಾಯಿ, ಮಾರುತಿ, ಕೃಷ್ಣ, ರಶ್ಮಿ, ರಾಣಿ ಹಾಗೂ ಕೇಶವ ಸೇರಿದಂತೆ ಹಲವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News