ಶಿವಮೊಗ್ಗ: ಅಲೆಮಾರಿ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸಲು ಒತ್ತಾಯಿಸಿ ಸಿಎಂಗೆ ಮನವಿ

Update: 2020-11-29 11:54 GMT

ಶಿವಮೊಗ್ಗ, ನ.29: ಅಂಬೇಡ್ಕರ್ ನಗರ(ಹಕ್ಕಿಪಿಕ್ಕಿ ಕಾಲನಿ) ದಲ್ಲಿ ವಾಸವಿರುವ 350ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸಿ ಮೂಲಭೂತ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಇಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು.

8-10 ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಅಲೆಮಾರಿಗಳಿಗೆ ಇದುವರೆಗೂ ಜಿಲ್ಲಾಡಳಿತ ಕನಿಷ್ಠ ಮೂಲಭೂತ ಸೌಲಭ್ಯ ಒದಿಗಿಸಿಲ್ಲ. ನೀರು, ರಸ್ತೆ, ಶೌಚಾಲಯ, ವಿದ್ಯುತ್ ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಿದ್ದಾರೆ. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡರೆ ಅದಕ್ಕೂ ಬಿಡದೇ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಇದನ್ನು ತಪ್ಪಿಸಬೇಕೆಂದು ಮುಖಂಡರು ಸಿಎಂ ಬಳಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಹೆಚ್.ಹಾಲೇಶಪ್ಪ, ಮುಂಖಡರಾದ ಆನಂದ್, ಮಂಜುನಾಥ್, ಶಿವಕುಮಾರ್, ರಂಗಸ್ವಾಮಿ, ಸೂಗೂರು ಪರಮೇಶ್, ಕಿಟ್ಟಿ, ವೀರೇಶ್, ಕರೀಷ್ಮ, ಮೀನ, ರಾಜವೇಲು, ನಶಿಕ್ ಬಾಬು, ಶಂಕರ್, ಸ್ಪಂದನ ಚಂದ್ರು, ಜಗ್ಗು ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News