ಅಂಧ ಅಭ್ಯರ್ಥಿಗಳಿಗೆ ಸೌಲಭ್ಯ ಒದಗಿಸುವ ಆದೇಶಕ್ಕೆ ಮಾರ್ಪಾಡು ಮಾಡಲು ಹೈಕೋರ್ಟ್ ಸೂಚನೆ

Update: 2020-11-29 16:27 GMT

ಬೆಂಗಳೂರು, ನ. 29: ಕರ್ನಾಟಕ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇಮಕಾತಿ ಮಾಡಲು ಆಯ್ಕೆ ಪ್ರಾಧಿಕಾರಗಳು ನಡೆಸುವ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅಂಧ ಅಭ್ಯರ್ಥಿಗಳಿಗೆ ಲಿಪಿಕಾರರ ಸೇವೆ ಹಾಗೂ ಇತರ ಸೌಲಭ್ಯ ಒದಗಿಸುವ ಸಂಬಂಧದ ಆದೇಶಕ್ಕೆ ಕೆಲ ಮಾರ್ಪಾಡು ಮಾಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.    

ದಿ ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.

ಕೇಂದ್ರ ಸರಕಾರದ ಮಾರ್ಗಸೂಚಿಗಳಂತೆ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರ ಅನ್ವಯ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಸಕ್ಷಮ ಅಧಿಕಾರಿ ನೀಡುವ ಅಂಗವಿಕಲ ಪ್ರಮಾಣಪತ್ರ ಇಡೀ ದೇಶದಲ್ಲಿ  ಪರಿಗಣಿಸಲ್ಪಡಬೇಕು. ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಬೇಕಾಗುವ ಅಗತ್ಯ ಉಪಕರಣಗಳ ವಿವರಗಳನ್ನು ಸೇರಿಸಿ ಡಿ.21ರೊಳಗೆ ಆದೇಶ ಮಾರ್ಪಾಡು ಮಾಡಲು ನ್ಯಾಯಪೀಠವು ರಾಜ್ಯ ಸರಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News