ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಹ ಧನ ಸ್ಥಗಿತಗೊಳಿಸಿದ ರಾಜ್ಯ ಸರಕಾರ

Update: 2020-11-29 16:52 GMT

ಬೆಂಗಳೂರು, ನ. 29: ರಾಜ್ಯ ಸರಕಾರವು ಸಿರಿಧಾನ್ಯ ಬೆಳೆಯುವ ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಸ್ಥಗಿತಗೊಳಿಸಿದ್ದು, ಪ್ರೋತ್ಸಹ ಧನದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ ಉಂಟಾಗಿದೆ.

ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ರಾಜ್ಯ ಸರಕಾರ ಮೂರು ವರ್ಷದಿಂದ ರೈತ ಸಿರಿ ಹೆಸರಿನಲ್ಲಿ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಧಿಡೀರ್ ಆಗಿ ಸ್ಥಗಿತಗೊಳಿಸಿರುವುದು ರೈತರು ವಿರೋಧಿಸಿದ್ದಾರೆ.

ಒಂದು ಹೆಕ್ಟೇರ್ ನಲ್ಲಿ ಸಿರಿಧಾನ್ಯ ಬೆಳೆದರೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಈ ಹಿಂದೆ ಘೋಷಿಸಿದ್ದ ರಾಜ್ಯ ಸರಕಾರ ಈ ವರ್ಷ ಅರ್ಜಿ ಪಡೆಯದೆ ಪ್ರೋತ್ಸಾಹ ಧನ ನಿಲ್ಲಿಸಿದೆ. ಈ ಮೂಲಕ ಸಿರಿಧಾನ್ಯ ಬೆಳೆಯುವ ರೈತರ ಕೆಂಗಣ್ಣಿಗೆ ಗುರಿಯಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News