ನಿರಾಣಿ ಸಹಾಯಕ ನಿಯಮಿತದಲ್ಲಿ ಅವ್ಯವಹಾರ: ಗ್ರಾಹಕರ ಆರೋಪ

Update: 2020-11-29 17:01 GMT

ಬಾಗಲಕೋಟೆ, ನ. 29: ನಗರದ ಶ್ರೀಮುರುಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ ಸಹಕಾರ ನಿಯಮಿತದಲ್ಲಿ ಅವ್ಯವಹಾರ ನಡೆದಿದೆ ಎಂದು ಗ್ರಾಹಕರು ಗಂಭೀರ ಆರೋಪ ಮಾಡಿದ್ದಾರೆ.

ಅಮನಿಕುಮಾರ ದೇಶಪಾಂಡೆ ಅಧ್ಯಕ್ಷತೆಯಲ್ಲಿ ಇನ್ನಿತರೆ 10 ಸದಸ್ಯರ ಒಳಗೊಂಡತೆ 2010ರಲ್ಲಿ ಶ್ರೀಮುರುಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸ್ಥಾಪನೆಯಾಗಿತ್ತು. ಮುರುಗೇಶ ನಿರಾಣಿ ಹೆಸರಿದ್ದ ಕಾರಣ ಜನ ನಂಬಿಕೆಯಿಂದ ಹಣವನ್ನು ಠೇವಣಿ ಮಾಡಿದ್ದಾರೆ. ಆದರೆ, ಕಳೆದ 18 ತಿಂಗಳಿನಿಂದ ಶ್ರೀ ಮುರುಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸ್ಥಗಿತವಾಗಿದೆ. ನಂಬಿ ಹಣ ಇಟ್ಟವರು ಕಂಗಾಲಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಜಿಲ್ಲಾಧಿಕಾರಿ, ಸಹಕಾರಿ ಇಲಾಖೆ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಹಣ ವಾಪಸ್ಸು ಕೈ ಸೇರಿಲ್ಲ. ಈ ಕಾರಣಕ್ಕೆ ಗ್ರಾಹಕರು ನ್ಯಾಯಕ್ಕೆ ಆಗ್ರಹಿಸಿ ಜಿಲ್ಲಾ ಸಹಕಾರಿ ಇಲಾಖೆ ಕಚೇರಿ ಎದುರಿಗೆ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಸುಮಾರು 61 ಕೋಟಿ ರೂಪಾಯಿ ವಹಿವಾಟಿನ ಸಂಸ್ಥೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News