ವಿವಿಧ ನಿಗಮ- ಮಂಡಳಿಗಳಿಗೆ ನಿರ್ದೇಶಕರು, ಸದಸ್ಯರ ನೇಮಕ

Update: 2020-11-30 14:30 GMT

ಬೆಂಗಳೂರು, ನ.30: ರಾಜ್ಯ ಸರಕಾರವು ವಿವಿಧ ನಿಗಮ, ಮಂಡಳಿಗಳಿಗೆ ಅಧಿಕಾರೇತರ ನಿರ್ದೇಶಕರು ಹಾಗೂ ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶಿಸಿ ಅಧಿಸೂಚನೆ ಹೊರಡಿಸಿದೆ.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕಾರೇತರ ನಿರ್ದೇಶಕರನ್ನಾಗಿ ದಾವಣಗೆರೆ ಜಿಲ್ಲೆಯ ಗೌತಮ್ ಕುಮಾರ್ ಜೈನ್, ಮಂಗಳೂರು ಜಿಲ್ಲೆಯ ಸಿರಾಜುದ್ದೀನ್, ಕಲಬುರಗಿ ಜಿಲ್ಲೆಯ ಸದ್ದಾಂ ಹುಸೇನ್ ಮನ್ಸೂರ್ ಅಲಿ ಹಾಗೂ ಸುರೇಶ್ ಶಾಂತಪಾಲ ತಂಗಾ ಶ್ರೀನಿವಾಸ್ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಶಿವಮೊಗ್ಗ ಜಿಲ್ಲೆಯ ಎಸ್.ರಮೇಶ್, ಉಡುಪಿ ಜಿಲ್ಲೆಯ ಚಂದ್ರಯ್ಯ ಆಚಾರ್ಯ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಉಡುಪಿ ಜಿಲ್ಲೆಯ ಕೃಷ್ಣ ದೇವಾಡಿಗ, ಶಿವಮೊಗ್ಗ ಜಿಲ್ಲೆಯ ಎಂ.ಸಿ.ಓಂಕಾರಮೂರ್ತಿ, ಚಿತ್ರದುರ್ಗ ಜಿಲ್ಲೆಯ ಡಿ.ಮಂಜುನಾಥ್, ಬೆಳಗಾವಿ ಜಿಲ್ಲೆಯ ಶಾಮಾನಂದ ಬಾಳಪ್ಪಾ ಪೂಜೇರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಎ.ಜಿ.ನಾಗರಾಜ, ರಾಜ್ಯ ಅಲೆಮಾರಿ/ ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಶಿವಮೊಗ್ಗ ಜಿಲ್ಲೆಯ ಕೆ.ಎಚ್.ಲಕ್ಷ್ಮಣ್ ಅವರನ್ನು ನಿರ್ದೇಶಕರು, ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮಂಗಳೂರು ಜಿಲ್ಲೆಯ ಕೆ.ಟಿ.ಸುವರ್ಣ, ಉಡುಪಿ ಜಿಲ್ಲೆಯ ಅರುಣ್ ಕುಮಾರ್, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಬಾಗಲಕೋಟೆ ಜಿಲ್ಲೆಯ ಪಾಂಡಪ್ಪ ನಾರಾಯಣ ಸಿದ್ಧಾಪುರ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಕಲಬುರಗಿ ಜಿಲ್ಲೆಯ ಶರಣಪ್ಪ ನಾಟೀಕರ್, ಹಾವೇರಿ ಜಿಲ್ಲೆಯ ಜಿತೇಂದ್ರ ರಾಮಚಂದ್ರಪ್ಪ ಸುಣಗಾರ, ಬಾಗಲಕೋಟೆ ಜಿಲ್ಲೆಯ ನಾಗಪ್ಪ ಅಂಬಿಯನ್ನು ಅಧಿಕಾರೇತರ ನಿರ್ದೇಶಕರು, ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿ.ಕೆ.ಚಿಕ್ಕಹನುಮಯ್ಯ ಹಾಗೂ ಬಾಗಲಕೋಟೆ ಜಿಲ್ಲೆಯ ಸದಾಶಿವ ಇಟಕಣ್ಣವರ ಅವರನ್ನು ಅಧಿಕಾರೇತರ ನಿರ್ದೇಶಕರು, ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News