ಬೈಡೆನ್ ಜಯ ದೃಢಪಡಿಸಿದ ಅರಿಝೋನಾ

Update: 2020-12-01 03:40 GMT

ಅರಿಝೋನಾ, ಡಿ.1: ಅಮೆರಿಕದ ಅರಿಝೋನಾ ರಾಜ್ಯದಲ್ಲಿ ಕೂಡಾ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಜೋ ಬೈಡೆನ್ ಜಯ ಸಾಧಿಸಿರುವುದನ್ನು ರಾಜ್ಯ ಆಡಳಿತ ದೃಢಪಡಿಸಿದೆ.

ರಾಜ್ಯದಲ್ಲಿ ಒಂಭತ್ತು ಸಂಸದರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಟ್ರಂಪ್ ಪರ ವಕೀಲರು ಸೋಮವಾರ ಆಪಾದಿಸಿದ್ದರು. ಆದರೆ ಡೆಮಾಕ್ರಟಿಕ್ ಪಕ್ಷದ ಸೆಕ್ರೆಟರಿ ಆಫ್ ಸ್ಟೇಟ್ ಕೀತ್ ಹಾಬ್ಸ್ ಮತ್ತು ರಿಪಬ್ಲಿಕನ್ ಪಕ್ಷದ ಗವರ್ನರ್ ಡೌಗ್ ಡ್ಯೂಸಿ, ಫಲಿತಾಂಶವನ್ನು ದೃಢಪಡಿಸಿದ್ದಾರೆ.

"ನಾವು ಅರಿಝೋನಾದಲ್ಲಿ ಚುನಾವಣೆಯನ್ನು ಚೆನ್ನಾಗಿ ನಿರ್ವಹಿಸಿದ್ದೇವೆ. ವ್ಯವಸ್ಥೆ ಬಲಿಷ್ಠವಾಗಿದೆ" ಎಂದು ಡ್ಯೂಸಿ ಹೇಳಿದ್ದಾರೆ. ಅರಿಝೋನಾದಲ್ಲಿ ಬೈಡೆನ್ 0.3% ಅಂತರದಿಂದ ಜಯ ಸಾಧಿಸಿದ್ದಾರೆ. ರಾಜ್ಯದಲ್ಲಿ 34 ಲಕ್ಷ ಮತಗಳು ಚಲಾವಣೆಯಾಗಿದ್ದು, 10,500 ಮತಗಳಿಂದ ಬೈಡೆನ್ ಗೆದ್ದಿದ್ದು, ಅವರು ಕಳೆದ 70 ವರ್ಷಗಳಲ್ಲಿ ಈ ರಾಜ್ಯದಲ್ಲಿ ಗೆಲುವು ಸಾಧಿಸಿದ ಎರಡನೇ ಡೆಮಾಕ್ರಟಿಕ್ ಅಭ್ಯರ್ಥಿ.

ಈ ದೃಢೀಕರಣದೊಂದಿಗೆ ಡೆಮಾಕ್ರೆಟಿಕ್ ಅಭ್ಯರ್ಥಿ ಮಾರ್ಕ್ ಕೆಲ್ಲಿಯವರು ಅಮೆರಿಕದ ಸೆನೆಟ್‌ಗೆ ಪ್ರವೇಶ ಪಡೆದಿದ್ದಾರೆ. ಜಾನ್ ಮೆಕೆನ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ವಿಶೇಷ ಚುನಾವಣೆಯಲ್ಲಿ ಮಾರ್ಕ್ ಕೆಲ್ಲಿ ಆಯ್ಕೆಯಾಗಿದ್ದು, ಬುಧವಾರ ವಾಷಿಂಗ್ಟನ್‌ನಲ್ಲಿ ಅವರು ಅಧಿಕಾರ ಸ್ವೀಕರಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News