ಕಲಬುರಗಿ: ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Update: 2020-12-01 09:08 GMT

ಕಲಬುರಗಿ, ಡಿ.1: ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಕಲಬುರಗಿಯ ವಿಂಟೇಜ್ ಪ್ಯಾಲೇಸ್ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.

ಯಾದಗಿರಿ ಜಿಲ್ಲೆಯ ಗುರುಮಠದಕಲ್‌ನ ಉಮ್ಮೀದ್ ವೆಲ್ಫೇರ್ ಅಸೋಸಿಯೇಶನ್ ಮತ್ತು ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಭಯ ಜಿಲ್ಲೆಗಳ ಸರಕಾರಿ ಶಾಲೆಗಳ 37 ಶಿಕ್ಷಕರನ್ನು ಸನ್ಮಾನಿಸಲಾಯಿತು. ಇದರಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ 26 ಮತ್ತು ಪ್ರೌಢಶಾಲೆಯ 11 ಶಿಕ್ಷಕರು ಸೇರಿದ್ದರು.

ಪ್ರಶಸ್ತಿ ವಿಜೇತ ಶಿಕ್ಷಕರ ವಿವರ

ಕಲಬುರಗಿ(ಉತ್ತರ):

ನುಸ್ರತ್ ಪರ್ವೀನ್, ಮುಈನುದ್ದೀನ್, ರಯಿಸಾ ಸುಲ್ತಾನ, ಅಹ್ಮದಿ ಬೇಗಂ, ಆಮೀನಾ ಸುಲ್ತಾನ, ಜಮೀಲ್ ಫಾತಿಮಾ, ಸೋಮನ್ ಗೌಡ ವಿಠ್ಠಲಪುರ.

ಕಲಬುರಗಿ(ದಕ್ಷಿಣ):
ಫೌಝಿಯ ಬೇಗಂ, ಸೈಖ್ವಾ ಹಸನ್

ಚಿತ್ತಾಪುರ:
ಯಾಕೂಬ್ ಅಲಿ, ಸಹನ ಅಂಜುಂ, ಶೈಖ್ ಸಾಯಿರಾ ಬಾನು, ಝೈಬುನ್ನಿಸಾ ಬೇಗಂ.

ಸೇಡಂ:
ಎಂ.ಡಿ.ಅಬ್ದುಲ್ ಫಹೀಂ, ನಯೀಂ ಸುಲ್ತಾನ, ಸುಜಾತಾ ಹಿರೇಮಠ, ಆಶಾ ತಸ್ಕೀನ್.

ಚಿಂಚೋಳಿ:
ಉಮರ್ ಹುದ್ದಾರ್, ರಿಝ್ವಾನ ಬೇಗಂ, ಮುಬೀನ್ ಫಾತಿಮಾ.

ಜೇವರ್ಗಿ:
ಎಂ.ಡಿ.ಯೂಸುಫ್, ಸರ್ಫ್ರಾಝ್, ರುದ್ರಪ್ಪ ಗೌಡ.

ಅಫ್ಝಲ್‌ಪುರ:
ಅಸ್ಮಾ ಶಾಲಂ, ಶಬಾನ ಬೇಗಂ, ಮುಹಮ್ಮದ್ ಆಸಿಫ್ ಅತ್ತಾರ್.

ಆಳಂದ:
ಸೀಮಾ ರೂಬಿ, ಮೆಹ್ರಾಜುನ್ನಿಸಾ ಬೇಗಂ.

ಯಾದಗಿರಿ ಜಿಲ್ಲೆ
ಡಿ.ಸುಬಿಯಾ, ವೆಂಕಟೇಶ್ ನಾಯಕ್, ಖದೀಜಾ ಬೇಗಂ, ಮುಖ್ತಾರ್ ಅಹ್ಮದ್ ಜೆ. ಮುಲ್ಲಾ, ಝರೀನ, ಖಾಸಿಂ ಕೆ.
ಸಮೀನಾ, ಫರ್ಝಾನ, ರೊಹ್ರಾ ಖಾನುಂ ಮಸೂಂ ಖಾನ್ ಅವರಿಗೆ ‘ಸ್ಪಿರಿಟ್ ಆಫ್ ಎಜ್ಯುಕೇಶನ್ ಅವಾರ್ಡ್’ ನೀಡಲಾಯಿತು.

ಇದೇ ಸಂದರ್ಭ ಶೈಕ್ಷಣಿಕ ಸಾಧಕರಾದ ಡಾ.ಸಬಾ ಸುಲ್ತಾನ, ಝೀನತ್ ಬೇಗಂ, ನಝ್ನೀನ್, ಶುಜತ್ ಹುಸೈನ್, ಶಾಕಿರ್ ಅಹ್ಮದ್ ಮತ್ತು ಸಮಾಜ ಸೇವೆಗಾಗಿ ಜೈನುದ್ದೀನ್ ಶಿರ್ನಿಫರೋಶ್ ಅವರನ್ನು ಸನ್ಮಾನಿಸಲಾಯಿತು. ಅತಿಥಿಯಾಗಿದ್ದ ರಾಷ್ಟ್ರೀ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸುರೇಖಾ ಜಗನ್ನಾಥ್ ಡೇಂಗಿಯವರನ್ನೂ ಸನ್ಮಾನಿಸಲಾಯಿತು.

ಪಿ.ಎಂ.ಕುತುಬುದ್ದೀನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೀದರ್ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಕಶೀಫ್ ರಝಾ, ಮಝ್ಹರ್ ಹುಸೈನ್, ಸುರೇಖಾ ಜಗನ್ನಾಥ್ ಡೇಂಗಿ ಮುಹಮ್ಮದ್ ಅಲಿ, ಮುಹಮ್ಮದ್ ಫಯಾಝುದ್ದೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News