ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿಗೆ ವಿದ್ವಾಂಸ ಎ.ನರಸಿಂಹ ಭಟ್ ಸೇರಿ ಐವರು ಆಯ್ಕೆ

Update: 2020-12-01 14:32 GMT

ಬೆಂಗಳೂರು, ಡಿ.1: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕೊಡಮಾಡುವ 2020ನೇ ಸಾಲಿನ ಗೌರವ ಪ್ರಶಸ್ತಿಗೆ ಹಿರಿಯ ವಿದ್ವಾಂಸರಾದ ಎ.ನರಸಿಂಹ ಭಟ್(ಕಾಸರಗೋಡು), ಡಾ.ಎಂ.ಶಿವಕುಮಾರ ಸ್ವಾಮಿ(ಬೆಂಗಳೂರು), ಡಿ.ಎನ್.ಶ್ರೀನಾಥ್(ಶಿವಮೊಗ್ಗ), ಲಕ್ಷ್ಮೀಕಾಂತ ಎಸ್.ಹೆಗಡೆ(ಬೆಂಗಳೂರು) ಹಾಗೂ ಡಾ.ಸಿ.ಶಿವಕುಮಾರಸ್ವಾಮಿ(ಬೆಂಗಳೂರು) ಆಯ್ಕೆಯಾಗಿದ್ದಾರೆ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ತಲಾ 50 ಸಾವಿರ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಮುಂತಾದವುಗಳನ್ನು ಒಳಗೊಂಡಿರುತ್ತದೆ. ಹಾಗೆಯೇ 2019ನೇ ಸಾಲಿನಲ್ಲಿ ಪ್ರಥಮಾವೃತ್ತಿಯಲ್ಲಿ ಅನುವಾದಗೊಂಡಿರುವ ಐದು ಅನುವಾದಿತ ಪುಸ್ತಕಗಳಿಗೆ 2019ನೇ ಸಾಲಿನ ಪುಸ್ತಕ ಬಹುಮಾನವನ್ನು ನೀಡಲಾಗಿದೆ. ಪ್ರತಿ ಪ್ರಕಾರದ ಪುಸ್ತಕ 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

ಅನುವಾದಕರ ಹೆಸರು: ಪ್ರೊ.ವಿ.ಕೃಷ್ಣಮೂರ್ತಿ ರಾವ್ (ಡಬ್ಲು.ಬಿ.ಯೇಟ್ಸ್ ಕವಿಯ ಎಪ್ಪತ್ತು ಕವನಗಳು), ಪ್ರೊ.ವನಮಾಲಾ ವಿಶ್ವನಾಥ್ ಮತ್ತು ಡಾ.ಶಿವರಾಮ ಪಡಿಕ್ಕಲ್ (ಇಂದಿರಾ ಬಾಯಿ), ಬಿ.ನರಸಿಂಗರಾವ್ (ನಾನೆಂಬ ಭಾರತೀಯ), ಅಜಯ್ ವರ್ಮಾ ಅಲ್ಲೂರಿ(ವಿಮುಕ್ತೆ) ಹಾಗೂ ರಂಗನಾಥ ರಾಮಚಂದ್ರರಾವ್ (ಕುದ್ರೋಡು ತ್ರಿಶೂಲಂ ಪಟ್ಟಿನ ಕಥ) ಆಯ್ಕೆಯಾಗಿದ್ದಾರೆಂದು ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ್ ಮಿರ್ಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News