ಗೋಹತ್ಯೆ ನಿಷೇಧ ಅಧ್ಯಯನಕ್ಕೆ ಗುಜರಾತ್, ಉ.ಪ್ರದೇಶಕ್ಕೆ ಭೇಟಿ ನೀಡಲಿರುವ ಸಚಿವ ಪ್ರಭು ಚೌಹಾಣ್

Update: 2020-12-01 16:18 GMT

ಬೆಂಗಳೂರು, ಡಿ.1: ಗೋಹತ್ಯೆ ನಿಷೇಧ ರಾಜ್ಯದಲ್ಲಿ ಮತ್ತಷ್ಟು ಬಲಗೊಳಿಸಲು ಗುಜರಾತ್ ಮತ್ತು ಉತ್ತರ ಪ್ರದೇಶಕ್ಕೆ ತನ್ನ ನೆತೃತ್ವದಲ್ಲಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆ ಮಾಡಲಿದ್ದು ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನು ಮಾಡಿಕೊಳ್ಳಲಾಗಿದೆ ಎಂದು ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.

ಈಗಾಗಲೇ ಉತ್ತರಪ್ರದೇಶ ಮತ್ತು ಗುಜರಾತ್‍ನಲ್ಲಿ ಗೋಹತ್ಯೆ ಕಾಯ್ದೆ ಅನುಷ್ಠಾನ ಮಾಡಲಾಗಿದ್ದು ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುವುದು. ಈ ಎರಡೂ ರಾಜ್ಯಗಳಲ್ಲಿ ಕಾಯ್ದೆಯ ಅನುಷ್ಠಾನ, ನಿರ್ವಹಣೆ ಮತ್ತು ಗೋಶಾಲೆಗಳ ಭೇಟಿಯನ್ನು ಮಾಡಿ ಗೋವುಗಳ ರಕ್ಷಣೆ ಮತ್ತು ಅವುಗಳ ಆರೈಕೆಗಾಗಿ ಈ ರಾಜ್ಯಗಳಲ್ಲಿ ಕೈಗೊಂಡ ಕ್ರಮಗಳನ್ನು ಅಲ್ಲಿನ ಪಶುಸಂಗೋಪನೆ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ಡಿ.2 ರಿಂದ 4ರವರೆಗೆ ಉತ್ತರಪ್ರದೇಶದ ಲಖನೌ, ಗುಜಾರತ್‍ನ ಗಾಂಧಿನಗರಕ್ಕೆ ಭೇಟಿ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News