2021ರ ಎಪ್ರಿಲ್‍ನಿಂದ ಸರಕಾರಿ ನೌಕರರಿಗೆ ಉಚಿತ ಚಿಕಿತ್ಸೆ: ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ

Update: 2020-12-02 18:27 GMT

ಕಲಬುರಗಿ, ಡಿ.2: ರಾಜ್ಯ ಸರಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ಐವತ್ತು ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗುವುದು ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಷಡಕ್ಷರಿ ಅವರು, 50 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಕೊಡಿಸುವ ಉದ್ದೇಶವನ್ನು ಸರಕಾರಿ ನೌಕರರ ಸಂಘ ಹೊಂದಿದೆ. ಹಣಕಾಸು ಇಲಾಖೆ ಯೋಜನೆಗೆ ತಗಲುವ ವೆಚ್ಚ ಭರಿಸಲು ಒಪ್ಪಿದೆ. ಅಗತ್ಯವಾದಲ್ಲಿ ಸಂಘದ ವತಿಯಿಂದ ವಂತಿಗೆ ನೀಡಲಾಗುವುದು. 2021ರ ಎಪ್ರಿಲ್‍ನಿಂದ ಸರಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ 50 ಲಕ್ಷದವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಹೊರ ರೋಗಿಗಳು ಮತ್ತು ಒಳರೋಗಿಗಳಾಗಿ ದಾಖಲಾಗುವವರಿಗೂ ಉಚಿತ ಚಿಕಿತ್ಸೆ ಸಿಗಲಿದೆ. ನೌಕರರು ಮತ್ತು ಅವರ ಕುಟುಂಬ ಸದಸ್ಯರು ಸೇರಿ ಒಟ್ಟಾರೆ 20 ಲಕ್ಷ ಜನರಿಗೆ ವೈದ್ಯಕೀಯ ಸೌಲಭ್ಯದ ಪ್ರಯೋಜನ ಸಿಗಲಿದೆ. ರಾಜ್ಯ ಸರಕಾರ 800 ಕೋಟಿ ರೂಪಾಯಿ, ನೌಕರರು 400 ಕೋಟಿ ರೂಪಾಯಿ ಭರಿಸಲಿದ್ದು, ವಾರ್ಷಿಕ 1200 ಕೋಟಿ ರೂ. ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News