ಓಮ್ನಿ- ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರು ಮೃತ್ಯು, ಮತ್ತಿಬ್ಬರಿಗೆ ಗಂಭೀರ ಗಾಯ

Update: 2020-12-04 13:03 GMT

ಮಡಿಕೇರಿ, ಡಿ.4 : ಮಾರುತಿ ಓಮ್ನಿ ಮತ್ತು ಗೂಡ್ಸ್ ವಾಹನದ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದಿದೆ.    

ಮೂರ್ನಾಡು ಗ್ರಾಮದ ನಿವಾಸಿಗಳಾದ ರಮೇಶ್(44) ಹಾಗೂ ಸುಬ್ರಮಣಿ(46) ಎಂಬುವವರೇ ಸಾವನ್ನಪ್ಪಿದವರು. ಮಡಿಕೇರಿ ಮತ್ತು ವಿರಾಜಪೇಟೆಯನ್ನು ಸಂಪರ್ಕಿಸುವ ರಸ್ತೆಯ ನಡುವಿನಲ್ಲಿ ಬರುವ ಬೇತ್ರಿಯಲ್ಲಿ, ದುರ್ಘಟನೆ ನಡೆದಿದ್ದು, ಓಮ್ನಿಯಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.

ಗಾಯಾಳುಗಳನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News