ಈಶ್ವರಪ್ಪ ಮೂಲಕ ಕುರುಬ ಸಮಾಜ ಒಡೆಯಲು ಬಿಜೆಪಿ, ಆರೆಸ್ಸೆಸ್ ಸಂಚು: ಸಿದ್ದರಾಮಯ್ಯ ಆರೋಪ

Update: 2020-12-04 14:03 GMT
ಫೈಲ್ ಚಿತ್ರ

ಮೈಸೂರು, ಡಿ.4: ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಎಂಬ ಹೋರಾಟದ ನಾಯಕತ್ವವನ್ನು ಯಾರೂ ವಹಿಸಬೇಕಾಗಿಲ್ಲ. ಸಚಿವ ಕೆ.ಎಸ್.ಈಶ್ವರಪ್ಪ ಮೂಲಕ ಕುರುಬ ಸಮಾಜವನ್ನು ಒಡೆಯಲು ಬಿಜೆಪಿ ಮತ್ತು ಆರೆಸ್ಸೆಸ್ ಸಂಚು ನಡೆಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ನಗರದ ವಿಜ್ಞಾನ ಭವನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ  ವರ್ಗಗಳ ಜಾಗೃತ ವೇದಿಕೆ, ಕರ್ನಾಟಕ ದಲಿತ ಸಾಹಿತ್ಯ ವೇದಿಕೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕನಕ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಎಂಬುದರ ಹಿಂದೆ ಬಿಜೆಪಿ ಮತ್ತು ಅರೆಸ್ಸೆಸ್ ಕೈವಾಡವಿದೆ. ಸಚಿವ ಈಶ್ವರಪ್ಪನನ್ನು ಕೈಗೊಂಬೆ ಮಾಡಿಕೊಂಡು ಕುರುಬ ಸಮುದಾಯವನ್ನು ಒಡೆದು ನನ್ನ ನಾಯಕತ್ವವನ್ನು ಕುಂದಿಸವ ಕೆಲಸವನ್ನು ಬಿಜೆಪಿ ಮಾಡುತ್ತಿದೆ‌ ಎಂದು ಗಂಭೀರ ಆರೋಪ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News