ಭಾರತಕ್ಕೆ ವಿಮಾನ ಬಿಡಿಭಾಗಗಳ ಮಾರಾಟಕ್ಕೆ ಅವೆುರಿಕ ಅನುಮತಿ

Update: 2020-12-04 18:35 GMT

ವಾಶಿಂಗ್ಟನ್, ಡಿ. 4: ಸಿ-130ಜೆ ಸೂಪರ್ ಹರ್ಕ್ಯುಲಿಸ್ ಸೇನಾ ಸರಕು ಸಾಗಾಟ ವಿಮಾನಗಳಿಗಾಗಿ 90 ಮಿಲಿಯ ಡಾಲರ್ (ಸುಮಾರು 664 ಕೋಟಿ ರೂಪಾಯಿ) ಮೌಲ್ಯದ ಸೇನಾ ಸಾಮಗ್ರಿಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಅಂಗೀಕಾರ ನೀಡಿದೆ.

ಈ ಪ್ರಸ್ತಾಪಿತ ಮಾರಾಟವು ಅವೆುರಿಕದ ವಿದೇಶ ನೀತಿ ಮತ್ತು ರಾಷ್ಟ್ರೀಯ ಭದ್ರತೆಗೆ ಪೂರಕವಾಗಿದೆ ಎಂದು ರಕ್ಷಣಾ ಇಲಾಖೆಯ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ (ಡಿಎಸ್‌ಸಿಎ) ಗುರುವಾರ ತಿಳಿಸಿದೆ. ಈ ಮೂಲಕ ಅಮೆರಿಕ-ಭಾರತ ರಕ್ಷಣಾ ಬಾಂಧವ್ಯವನ್ನು ಬಲಪಡಿಸಲು ಹಾಗೂ ಪ್ರಮುಖ ರಕ್ಷಣಾ ಭಾಗೀದಾರನ ಭದ್ರತೆಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.

ಬಿಡಿಭಾಗಗಳನ್ನು ಪೂರೈಸುವ ಮೂಲಕ ಈ ಹಿಂದೆ ಭಾರತಕ್ಕೆ ಮಾರಾಟ ಮಾಡಲಾಗಿರುವ ಸರಕು ಸಾಗಾಟ ವಿಮಾನಗಳನ್ನು ಸುಸ್ಥಿತಿಯಲ್ಲಿಡಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News