ಗ್ರಾ.ಪಂ.ಚುನಾವಣೆ: ವಿಧಾನಸಭಾ ಕ್ಷೇತ್ರವಾರು ಮುಖಂಡರಿಗೆ ಜವಾಬ್ದಾರಿ ಹಂಚಿಕೆ ಮಾಡಿ ಡಿಕೆಶಿ ಆದೇಶ

Update: 2020-12-05 12:09 GMT

ಬೆಂಗಳೂರು, ಡಿ.5: ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಪಕ್ಷಕ್ಕೆ ಶಕ್ತಿ ತುಂಬಲು ಸಹಕಾರಿಯಾಗುವಂತೆ ಲೋಕಸಭಾ ಅಭ್ಯರ್ಥಿಗಳು, ಶಾಸಕರು, ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ಜಿಲ್ಲಾ, ತಾಲೂಕು ಪಂಚಾಯತ್ ಪ್ರತಿನಿಧಿಗಳನ್ನು ಒಳಗೊಂಡಂತೆ ವಿಧಾನಸಭಾ ಕ್ಷೇತ್ರವಾರು ಚುನಾವಣೆ ಜವಾಬ್ದಾರಿಯನ್ನು ನೀಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಮುಧೋಳ ವಿಧಾನಸಭಾ ಕ್ಷೇತ್ರ-ಎಸ್.ಆರ್.ಪಾಟೀಲ್, ತೆರದಾಳ-ಉಮಾಶ್ರೀ, ಜಮಖಂಡಿ- ಆನಂದ ನ್ಯಾಮಗೌಡ, ಬೀಳಗಿ- ಜೆ.ಟಿ.ಪಾಟೀಲ್, ಬಾದಾಮಿ- ಸಿದ್ದರಾಮಯ್ಯ, ಬಾಗಲಕೋಟೆ- ಎಚ್.ವೈ.ಮೇಟಿ, ಹುನಗುಂದ- ವಿಜಯಾನಂದ ಕಾಶಪ್ಪನವರ್, ಬೆಂಗಳೂರು ದಕ್ಷಿಣ- ರಾಮಲಿಂಗಾರೆಡ್ಡಿ, ಬ್ಯಾಟರಾಯನಪುರ, ಯಶವಂತಪುರ, ಯಲಹಂಕ- ಕೃಷ್ಣಭೈರೇಗೌಡ.

ಮಹದೇವಪುರ-ಎಂ.ನಾರಾಯಣಸ್ವಾಮಿ, ಆನೇಕಲ್-ಬಿ.ಶಿವಣ್ಣ, ಹೊಸಕೋಟೆ- ಭೈರತಿ ಸುರೇಶ್, ನೆಲಮಂಗಲ-ಎಸ್.ರವಿ, ದೊಡ್ಡಬಳ್ಳಾಪುರ-ವೆಂಕಟರಮಣಯ್ಯ, ಯಮಕನಮರಡಿ, ಗೋಕಾಕ್, ಅರಭಾವಿ- ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮಾಂತರ ಹಾಗೂ ಸವದತ್ತಿ ಯಲ್ಲಮ್ಮ- ಲಕ್ಷ್ಮಿ ಹೆಬ್ಬಾಳ್ಕರ್, ಕಿತ್ತೂರು-ಪ್ರಸಾದ್ ಅಬ್ಬಯ್ಯ, ಅಥಣಿ- ಎಂ.ಬಿ.ಪಾಟೀಲ್, ಬೈಲಹೊಂಗಲ- ಮಹಾಂತೇಶ್ ಕೌಜಲಗಿ.

ಖಾನಾಪುರ- ಡಾ.ಅಂಜಲಿ ನಿಂಬಾಳ್ಕರ್, ಕಾಗವಾಡ- ಪ್ರಕಾಶ್ ಹುಕ್ಕೇರಿ, ಚಿಕ್ಕೋಡಿ ಸದಲಗ- ಗಣೇಶ್ ಹುಕ್ಕೇರಿ, ಹುಕ್ಕೇರಿ- ಎ.ಬಿ.ಪಾಟೀಲ್, ಕುಡಚಿ ಮತ್ತು ರಾಯಭಾಗ್- ಡಾ.ಎಲ್.ಹನುಮಂತಯ್ಯ, ನಿಪ್ಪಾಣಿ- ವೀರಕುಮಾರ್ ಪಾಟೀಲ್, ಬೆಳಗಾವಿ ಉತ್ತರ ಮತ್ತು ದಕ್ಷಿಣ- ಫಿರೋಝ್ ಸೇಠ್, ರಾಮದುರ್ಗ- ಪಿ.ಎಂ.ಅಶೋಕ್, ಹರಪ್ಪನಹಳ್ಳಿ- ಅಲ್ಲಂವೀರಭದ್ರಪ್ಪ, ಬಳ್ಳಾರಿ- ನಾಗೇಂದ್ರ, ಕೂಡ್ಲಿಗಿ- ವಿ.ಎಸ್.ಉಗ್ರಪ್ಪ, ಹಗರಿಬೊಮ್ಮನಹಳ್ಳಿ- ಭೀಮಾ ನಾಯ್ಕ್, ವಿಜಯನಗರ- ಕೆ.ಸಿ.ಕೊಂಡಯ್ಯ.

ಕಂಪ್ಲಿ- ಗಣೇಶ್, ಸಿರಗುಪ್ಪ- ನಾಗೇಂದ್ರ ಮತ್ತು ನಾಗರಾಜ್, ಸಂಡೂರು-ಇ.ತುಕಾರಾಂ, ಹಡಗಲಿ-ಪಿ.ಟಿ.ಪರಮೇಶ್ವರ್ ನಾಯ್ಕ್, ಭಾಲ್ಕಿ ಮತ್ತು ಬಸವಕಲ್ಯಾಣ-ಈಶ್ವರ್ ಖಂಡ್ರೆ, ಹುಮ್ನಾಬಾದ್ ಮತ್ತು ಬೀದರ್ ದಕ್ಷಿಣ-ರಾಮಶೇಖರ್ ಪಾಟೀಲ್, ಬೀದರ್- ರಹೀಮ್ ಖಾನ್, ಔರಾದ್- ವಿಜಯ್‍ಸಿಂಗ್, ಬಬಲೇಶ್ವರ ಮತ್ತು ದೇವರಹಿಪ್ಪರಗಿ-ಎಂ.ಬಿ.ಪಾಟೀಲ್, ಬಸವನಬಾಗೇವಾಡಿ ಮತ್ತು ಸಿಂಧಗಿ-ಶಿವಾನಂದ ಪಾಟೀಲ್.

ಮುದ್ದೇಬಿಹಾಳ-ಅಪ್ಪಾಜಿ ನಾಡಗೌಡ, ನಾಗಠಾಣ-ರಾಜು ಅಲಗೂರು ಮತ್ತು ವಿಠ್ಠಲ್ ಕಟಕ್ ದೊಂಡ, ಇಂಡಿ-ಯಶವಂತರಾಯಗೌಡ ಪಾಟೀಲ್, ಬಿಜಾಪುರ ನಗರ-ಅಬ್ದುಲ್ ಹಮೀದ್ ಮುಶ್ರಿಫ್, ಕೊಳ್ಳೇಗಾಲ-ಕೃಷ್ಣಮೂರ್ತಿ, ಗುಂಡ್ಲುಪೇಟೆ-ಆರ್.ಧರ್ಮಸೇನಾ, ಹನೂರು-ನರೇಂದ್ರ, ಚಾಮರಾಜನಗರ-ಸಿ.ಪುಟ್ಟರಂಗ ಶೆಟ್ಟಿ, ಚಿಕ್ಕಬಳ್ಳಾಪುರ-ವಿ.ಆರ್.ಸುದರ್ಶನ್, ಚಿಂತಾಮಣಿ-ರಮೇಶ್ ಕುಮಾರ್, ಗೌರಿಬಿದನೂರು-ಎನ್.ಎಚ್.ಶಿವಶಂಕರರೆಡ್ಡಿ, ಬಾಗೇಪಲ್ಲಿ-ಸುಬ್ಬಾರೆಡ್ಡಿ, ಶಿಡ್ಲಘಟ್ಟ-ವಿ.ಮುನಿಯಪ್ಪ.

ಚಿಕ್ಕಮಗಳೂರು-ಕೆ.ಜೆ.ಜಾರ್ಜ್ ಮತ್ತು ಡಾ.ಬಿ.ಎಲ್.ಶಂಕರ್, ತರೀಕೆರೆ-ತಾರಾದೇವಿ ಸಿದ್ಧಾರ್ಥ, ಮೂಡಿಗೆರೆ- ಮೋಟಮ್ಮ, ಶೃಂಗೇರಿ-ರಾಜೇಗೌಡ, ಕಡೂರು- ಗಾಯತ್ರಿ ಶಾಂತೇಗೌಡ, ಹೊಳಲ್ಕೆರೆ-ಎಚ್.ಆಂಜನೇಯ, ಮೊಳಕಾಲ್ಮೂರು-ಬಿ.ಎನ್.ಚಂದ್ರಪ್ಪ, ಚಳ್ಳಕೆರೆ-ಟಿ.ರಘುಮೂರ್ತಿ, ಚಿತ್ರದುರ್ಗ-ರಘು ಆಚಾರ್, ಹಿರಿಯೂರು- ಡಿ.ಸುಧಾಕರ್, ಹೊಸದುರ್ಗ-ಬಿ.ಜಿ.ಗೋವಿಂದಪ್ಪ, ನವಲಗುಂದ-ಐ.ಜಿ.ಸನದಿ, ಕುಂದಗೋಳ-ಕುಸುಮಾವತಿ ಶಿವಳ್ಳಿ, ಧಾರವಾಡ-ಪ್ರಸಾದ್ ಅಬ್ಬಯ್ಯ, ಕಲಘಟಗಿ-ಸಂತೋಷ್ ಲಾಡ್ ಮತ್ತು ನಾಗರಾಜ್ ಛಬ್ಬಿ.

ದಾವಣಗೆರೆ ದಕ್ಷಿಣ- ಶಾಮನೂರು ಶಿವಶಂಕರಪ್ಪ, ದಾವಣಗೆರೆ ಉತ್ತರ ಮತ್ತು ಮಾಯಕೊಂಡ-ಎಸ್.ಎಸ್.ಮಲ್ಲಿಕಾರ್ಜುನ್, ಹರಿಹರ-ಟಿ.ರಾಮಪ್ಪ, ಚನ್ನಗಿರಿ-ವಡ್ನಾಳ್ ರಾಜಣ್ಣ, ಹೊನ್ನಾಳಿ-ಡಿ.ಜಿ.ಶಾಂತನಗೌಡ, ಜಗಳೂರು-ಕೆ.ಅಬ್ದುಲ್ ಜಬ್ಬಾರ್, ಬಂಟ್ವಾಳ- ರಮಾನಾಥ ರೈ, ಸುಳ್ಯ- ಐವನ್ ಡಿಸೋಜ, ಮಂಗಳೂರು ಮತ್ತು ಪುತ್ತೂರು- ಯು.ಟಿ.ಖಾದರ್, ಬೆಳ್ತಂಗಡಿ- ಜೆ.ಆರ್.ಲೋಬೊ, ಮೂಡಬಿದಿರೆ- ಅಭಯ್‍ಚಂದ್ರ ಜೈನ್ ಮತ್ತು ಮಿಥುನ್ ರೈ, ಮಂಗಳೂರು ನಗರ ಉತ್ತರ- ಬಿ.ಎ.ಮೊಯಿದ್ದೀನ್ ಬಾವ ಮತ್ತು ಮಿಥುನ್ ರೈ.

ಗದಗ-ಎಚ್.ಕೆ.ಪಾಟೀಲ್, ನರಗುಂದ-ಬಿ.ಆರ್.ಯಾವಗಲ್, ಶಿರಹಟ್ಟಿ-ಡಿ.ಆರ್.ಪಾಟೀಲ್, ರೋಣ-ಜಿ.ಎಸ್.ಪಾಟೀಲ್, ಸೇಡಂ ಮತ್ತು ಚಿಂಚೋಳಿ-ಡಾ.ಶರಣಪ್ರಕಾಶ್ ಪಾಟೀಲ್, ಆಳಂದ-ಬಿ.ಆರ್.ಪಾಟೀಲ್, ಚಿತ್ತಾಪುರ-ಪ್ರಿಯಾಂಕ್ ಖರ್ಗೆ, ಅಫ್ಝಲ್‍ಪುರ-ಎಂ.ವೈ.ಪಾಟೀಲ್, ಜೇವರ್ಗಿ ಮತ್ತು ಗುಲ್ಬರ್ಗ ಗ್ರಾಮೀಣ-ಡಾ.ಅಜಯ್ ಸಿಂಗ್, ಗುಲ್ಬರ್ಗ ದಕ್ಷಿಣ-ಅಲ್ಲಮಪ್ರಭು ಪಾಟೀಲ್, ಗುಲ್ಬರ್ಗ ಉತ್ತರ-ಕನೀಝ್ ಫಾತಿಮಾ.

ಅರಕಲಗೂಡು-ಸಿ.ಎಂ.ಲಿಂಗಪ್ಪ, ಅರಸೀಕೆರೆ-ಜವರೇಗೌಡ, ಬೇಲೂರು-ಬಿ.ಶಿವರಾಮ್ ಮತ್ತು ಕೃಷ್ಣೇಗೌಡ, ಹಾಸನ-ನಸೀರ್ ಅಹ್ಮದ್, ಹೊಳೆನರಸೀಪುರ-ಎಂ.ಎ.ಗೋಪಾಲಸ್ವಾಮಿ, ಶ್ರವಣಬೆಳಗೋಳ-ಚಲುವರಾಯಸ್ವಾಮಿ, ಸಕಲೇಶಪುರ-ನರೇಂದ್ರಸ್ವಾಮಿ, ರಾಣೆಬೆನ್ನೂರು-ಕೆ.ಬಿ.ಕೋಳಿವಾಡ, ಹಾವೇರಿ-ರುದ್ರಪ್ಪ ಲಮಾಣಿ, ಶಿಗ್ಗಾಂವ್-ಬಸವರಾಜ್ ಶಿವಣ್ಣವರ್, ಹಾನಗಲ್-ಶ್ರೀನಿವಾಸ ಮಾನೆ, ಬ್ಯಾಡಗಿ-ಎಸ್.ಆರ್.ಪಾಟೀಲ್, ಹಿರೇಕೆರೂರು-ಬಿ.ಝೆಡ್.ಝಮೀರ್ ಅಹ್ಮದ್ ಖಾನ್.

ಮಡಿಕೇರಿ-ವಾಸು ಮತ್ತು ಕೆ.ವೆಂಕಟೇಶ್, ವಿರಾಜಪೇಟೆ-ವೀಣಾ ಅಚ್ಚಯ್ಯ, ಎ.ಎಸ್.ಪೊನ್ನಣ್ಣ ಮತ್ತು ಚಂದ್ರಮೌಳಿ, ಮುಳಬಾಗಿಲು-ಕೆ.ಎಚ್.ಮುನಿಯಪ್ಪ, ಶ್ರೀನಿವಾಸಪುರ-ಕೆ.ಆರ್.ರಮೇಶ್ ಕುಮಾರ್, ಕೋಲಾರ-ಕೆ.ಗೋವಿಂದರಾಜ್, ಬಂಗಾರಪೇಟೆ-ನಾರಾಯಣಸ್ವಾಮಿ, ಕೆಜಿಎಫ್- ರೂಪಾ ಶಶಿಧರ್, ಮಾಲೂರು-ನಂಜೇಗೌಡ, ಯಲಬುರ್ಗ-ಬಸವರಾಜ ರಾಯರಡ್ಡಿ, ಕುಷ್ಟಗಿ-ಅಮರೇಗೌಡ ಬಯ್ಯಾಪುರ, ಕನಕಗಿರಿ-ಶಿವರಾಜ್ ತಂಗಡಗಿ, ಗಂಗಾವತಿ-ಇಕ್ಬಾಲ್ ಅನ್ಸಾರಿ, ಕೊಪ್ಪಳ-ರಾಘವೇಂದ್ರ ಹಿಟ್ನಾಳ್.

ಚಾಮುಂಡೇಶ್ವರಿ-ಸಿದ್ದರಾಮಯ್ಯ, ಟಿ.ನರಸೀಪುರ-ಡಾ.ಎಚ್.ಸಿ.ಮಹದೇವಪ್ಪ, ನಂಜನಗೂಡು-ಕಳಲೆ ಕೇಶವಮೂರ್ತಿ, ವರುಣಾ-ಡಾ.ಯತೀಂದ್ರ, ಹುಣಸೂರು-ಎಚ್.ಪಿ.ಮಂಜುನಾಥ್, ಪಿರಿಯಾಪಟ್ಟಣ-ಕೆ.ವೆಂಕಟೇಶ್, ಕೆ.ಆರ್.ನಗರ- ತನ್ವೀರ್ ಸೇಠ್, ಎಚ್.ಡಿ.ಕೋಟೆ- ಅನಿಲ್ ಕುಮಾರ್, ಕೆ.ಆರ್.ಪೇಟೆ-ಎಂ.ಕೃಷ್ಣಪ್ಪ, ನಾಗಮಂಗಲ- ಚಲುವರಾಯಸ್ವಾಮಿ, ಮಳವಳ್ಳಿ-ಪಿ.ಎಂ.ನರೇಂದ್ರ ಸ್ವಾಮಿ, ಮಂಡ್ಯ ಮತ್ತು ಮೇಲುಕೋಟೆ-ಜಿ.ಸಿ.ಚಂದ್ರಶೇಖರ್, ಶ್ರೀರಂಗಪಟ್ಟಣ- ರಮೇಶ್ ಬಂಡಿಸಿದ್ದೇಗೌಡ, ಮದ್ದೂರು-ಎಂ.ಎಸ್.ಆತ್ಮಾನಂದ.

ರಾಯಚೂರು ಗ್ರಾಮೀಣ-ಬಸವನಗೌಡ ದದ್ದಲ್, ರಾಯಚೂರು-ಬಿ.ವಿ.ನಾಯ್ಕ್, ಮಾನ್ವಿ-ಹಂಪಯ್ಯ ನಾಯ್ಕ್, ದೇವದುರ್ಗ-ರಾಜಶೇಖರ್ ನಾಯ್ಕ್, ಲಿಂಗಸೂಗೂರು-ಡಿ.ಎಸ್.ಹೂಳಗೇರಿ, ಸಿಂಧನೂರು-ಹಂಪನಗೌಡ ಬಾದರ್ಲಿ, ಮಸ್ಕಿ-ಎನ್.ಎಸ್.ಬೋಸರಾಜು ಮತ್ತು ಕೆ.ವಿರೂಪಾಕ್ಷಪ್ಪ, ಚನ್ನಪಟ್ಟಣ ಮತ್ತು ಕನಕಪುರ-ಡಿ.ಕೆ.ಸುರೇಶ್, ರಾಮನಗರ-ಇಕ್ಬಾಲ್ ಹುಸೇನ್, ಮಾಗಡಿ-ಬಾಲಕೃಷ್ಣ, ಸಾಗರ-ಕಾಗೋಡು ತಿಮ್ಮಪ್ಪ, ಸೊರಬ-ಬೇಳೂರು ಗೋಪಾಲಕೃಷ್ಣ, ತೀರ್ಥಹಳ್ಳಿ-ಕಿಮ್ಮನೆ ರತ್ನಾಕರ್, ಶಿವಮೊಗ್ಗ ಗ್ರಾಮಾಂತರ-ಕೆ.ಶಿವಮೂರ್ತಿ, ಭದ್ರಾವತಿ-ಬಿ.ಕೆ.ಸಂಗಮೇಶ್, ಶಿಕಾರಿಪುರ-ಆರ್.ಪ್ರಸನ್ನಕುಮಾರ್.

ಕೊರಟಗೆರೆ ಮತ್ತು ಗುಬ್ಬಿ-ಡಾ.ಜಿ.ಪರಮೇಶ್ವರ್, ಮಧುಗಿರಿ ಮತ್ತು ತುಮಕೂರು ಗ್ರಾಮಾಂತರ-ಕೆ.ಎನ್.ರಾಜಣ್ಣ, ಚಿಕ್ಕನಾಯಕನಹಳ್ಳಿ-ಶಫಿ ಅಹ್ಮದ್, ತಿಪಟೂರು-ಕೆ.ಷಡಕ್ಷರಿ, ತುರುವೇಕೆರೆ-ಎಸ್.ಪಿ.ಮುದ್ದಹನುಮೇಗೌಡ, ಸಿರಾ-ಟಿ.ಬಿ.ಜಯಚಂದ್ರ, ಪಾವಗಡ-ವೆಂಕಟರಮಣಪ್ಪ, ಕುಣಿಗಲ್-ಡಾ.ರಂಗನಾಥ್, ಕಾರ್ಕಳ-ದಿನೇಶ್ ಗುಂಡೂರಾವ್, ಬೈಂದೂರು-ಗೋಪಾಲ ಪೂಜಾರಿ, ಕುಂದಾಪುರ ಮತ್ತು ಕಾಪು-ವಿನಯಕುಮಾರ್ ಸೊರಕೆ, ಉಡುಪಿ-ಪ್ರಮೋದ್ ಮಧ್ವರಾಜ್.

ಹಳಿಯಾಳ ಮತ್ತು ಕುಮುಟಾ-ಆರ್.ವಿ.ದೇಶಪಾಂಡೆ, ಭಟ್ಕಳ- ಮಂಕಾಲ ವೈದ್ಯ, ಶಿರಸಿ-ಎ.ಎಂ.ಹಿಂಡಸ್ಗೇರಿ, ಕಾರವಾರ-ಸತೀಶ್ ಸೈಲ್, ಯಲ್ಲಾಪುರ-ಎಂ.ಎಲ್.ಘೋಟ್ನೆಕರ್, ಯಾದಗಿರಿ-ಪ್ರಿಯಾಂಕ್ ಖರ್ಗೆ, ಶೋರಾಪುರ-ರಾಜಾ ವೆಂಕಟಪ್ಪ ನಾಯ್ಕ್, ಶಾಹಪುರ-ಶರಣಬಸಪ್ಪ ದರ್ಶನಾಪುರ ಹಾಗೂ ಗುರುಮಿಠ್ಕಲ್ ವಿಧಾನಸಭಾ ಕ್ಷೇತ್ರಕ್ಕೆ ಅರವಿಂದ ಅರಳಿಯವರಿಗೆ ಚುನಾವಣೆಯ ಜವಾಬ್ದಾರಿಯನ್ನು ವಹಿಸಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News