×
Ad

“ಪಂಚತಾರಾ ಹೋಟೆಲ್‍ನಲ್ಲಿದ್ದವರು ಸಿದ್ದರಾಮಯ್ಯ ಬಗ್ಗೆ ಮಾತನಾಡುವುದು ಬೇಡ"

Update: 2020-12-06 22:30 IST

ಬೆಂಗಳೂರು, ಡಿ.6: ಪಂಚತಾರಾ ಹೋಟೆಲ್‍ನಲ್ಲಿ ಕುಳಿತು ರಾಜಕಾರಣ ಮಾಡುವವರು ನಮ್ಮ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಮಾತನಾಡುವುದು ಬೇಡ ಎಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ದೇವೇಗೌಡ ಅವರು ಪ್ರಧಾನಿ ಆಗಿದ್ದು ಹೇಗೆ. ಕಾಂಗ್ರೆಸ್ ಬೆಂಬಲದಿಂದ ಎನ್ನುವುದು ಅರಿತುಕೊಳ್ಳಲಿ. ಅದೇ ರೀತಿ, ಕುಮಾರಸ್ವಾಮಿ ಸಹ ಮುಖ್ಯಮಂತ್ರಿ ಆಗಿದ್ದು ಕಾಂಗ್ರೆಸ್ ಬೆಂಬಲದಿಂದ ಎಂದರು.

ಕುಮಾರಸ್ವಾಮಿ ಅವರು ಈಗ ವ್ಯತಿರಿಕ್ತವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿ ಸಖ್ಯ ಮಾಡಿ ನಿಮಗೆ ಹೊರಗೆ ಹೋಗುವುದು, ಒಳಗೆ ಬರುವುದು ರೂಢಿ ಆಗಿದೆ. ಬಿಜೆಪಿ ಜತೆ ಹೋಗಿ ಏನೆಲ್ಲ ಆಯಿತು ಎಂಬುವುದನ್ನು ಜನರ ಮುಂದೆ ಹೇಳಲಿ ಎಂದು ವಾಗ್ದಾಳಿ ನಡೆಸಿದರು.

ನನಗೆ ಎಐಸಿಸಿ ಕಡೆಯಿಂದ ಬಂದರು ಹಾಗೂ ಒಳನಾಡು ಜಲಸಾರಿಗೆ ಖಾತೆ ಕೊಟ್ಟಿದ್ದರು. ಆದರೆ, ಅದನ್ನು ಎಚ್.ಡಿ.ರೇವಣ್ಣ ಏಕೆ ಇಟ್ಟುಕೊಂಡರು ಎಂದು ತಿಮ್ಮಾಪುರ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News