ಕುಮಾರಸ್ವಾಮಿ ಅಧಿಕಾರಕ್ಕಾಗಿ ಏನನ್ನಾದರೂ ಮಾತನಾಡುತ್ತಾರೆ: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ
Update: 2020-12-06 23:12 IST
ಮೈಸೂರು,ಡಿ.6: ಕುಮಾರಸ್ವಾಮಿ ಅವರಿಗೆ ಅಧಿಕಾರವೇ ಅಂತಿಮ ಗುರಿ. ಇದಕ್ಕಾಗಿ ಅವರು ಏನನ್ನಾದರೂ ಕೂಡಾ ಮಾತನಾಡುತ್ತಾರೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿರುಗೇಟು ನೀಡಿದ್ದಾರೆ.
ಸೆಕ್ಯುಲರ್ ವ್ಯಾಮೋಹದಿಂದ ಕಾಂಗ್ರೆಸ್ ಸೇರಿ ಕೆಟ್ಟೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಟ್ವಿಟರ್ ನಲ್ಲಿ ತಿರುಗೇಟು ನೀಡಿರುವ ಅವರು, ಕುಮಾರಸ್ವಾಮಿ ಹೇಳಿಕೆಯು ಜಾತ್ಯಾತೀತ ಜನತಾದಳ ಎಂಬ ಪಕ್ಷದ ಹೆಸರಿಗೇ ಕಳಂಕಪ್ರಾಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರನ್ನು ಗಂಭೀರವಾಗಿ ತೆಗೆದುಕೊಂಡರೆ ಭ್ರಮ ನಿರಸವಾಗುತ್ತದೆ ಅಷ್ಟೇ. ಕುಮಾರಸ್ವಾಮಿ ಅಂತಹವರು ಸೆಕ್ಯುಲರ್ ಎನ್ನುವುದಕ್ಕೂ ಕಮ್ಯುನಲ್ ಎನ್ನುವುದಕ್ಕೂ ಅಂತಹ ದೊಡ್ಡ ವ್ಯತ್ಯಾಸ ಏನಿಲ್ಲ ಎಂದು ಕಿಡಿಕಾರಿದ್ದಾರೆ.