×
Ad

ಕೆಫೆ ಕಾಫಿಡೇ ನೂತನ ಸಿಇಒ ಆಗಿ ಮಾಳವಿಕಾ ಹೆಗ್ಡೆ ನೇಮಕ

Update: 2020-12-08 22:07 IST

ಬೆಂಗಳೂರು, ಡಿ.8: ಕೆಫೆ ಕಾಫಿ ಡೇ ಎಂಟಪ್ರೈಸಸ್ ಲಿ., ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ನೇಮಕಗೊಂಡಿದ್ದಾರೆ.

ದೇಶದಾದ್ಯಂತ ಇರುವ ಕೆಫೆ ಕಾಫಿ ಡೇ ರೆಸ್ಟಾರೆಂಟ್‍ಗಳ ಮಾಲಕತ್ವವು ಸಿಡಿಇಎಲ್ ಕೈಯಲ್ಲಿ ಇದೆ. ಕಂಪನಿಯ ನಿರ್ದೇಶಕಿ ಆಗಿರುವ ಮಾಳವಿಕಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಇಒ ಆಗಿ ನೇಮಕ ಮಾಡಲಾಗಿದೆ ಎಂದು ಕಂಪನಿಯು ತಿಳಿಸಿದೆ.

ಕಾಫಿ ಉದ್ಯಮದ ಟೈಕೂನ್ ಆಗಿದ್ದ ಸಿದ್ದಾರ್ಥ ಅವರ ಶವ ಮಂಗಳೂರು ಬಳಿಯ ನದಿಯಲ್ಲಿ ಪತ್ತೆಯಾದ ಒಂದು ವರ್ಷದ ನಂತರ ಸಿದ್ದಾರ್ಥ್ ಅವರ ಪತ್ನಿ ಮಾಳವಿಕಾ ಹೆಗ್ಡೆ ಕಾಫೀ ಡೇ ಎಂಟರ್‍ಪ್ರೈಸಸ್‍ನ ನೂತನ ಸಿಇಒ ಆಗಿ ನೇಮಕಗೊಂಡಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಆರ್ಥಿಕ ಒತ್ತಡಗಳ ಕಾರಣ ಕಾಫಿ ಡೇ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಸಿದ್ದಾರ್ಥ ಮಂಗಳೂರು ಬಳಿಯ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಸಂಸ್ಥೆಯ ಸ್ವತಂತ್ರ ನಿರ್ದೇಶಕರಾಗಿದ್ದ ಎಸ್.ವಿ.ರಂಗನಾಥ್ ಮಧ್ಯಂತರ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News