ರಾಜ್ಯದಲ್ಲಿ ಕಾಂಗ್ರೆಸ್ ನಾಮಾವಶೇಷವಾಗುವ ದಿನ ದೂರವಿಲ್ಲ: ಬಿಜೆಪಿ
ಬೆಂಗಳೂರು, ಡಿ.14: ರಾಜ್ಯದಲ್ಲಿ ಸಂಭವಿಸಿದ ನೆರೆ, ಅತಿವೃಷ್ಟಿಗೆ ಯುಪಿಎ ಮತ್ತು ಎನ್‍ಡಿಎ ಸರಕಾರಗಳು ಬಿಡುಗಡೆ ಮಾಡಿರುವ ಹಣ. ಯುಪಿಎ ಸರಕಾರ (2004-14)-4462 ಕೋಟಿ ರೂ., ಎನ್‍ಡಿಎ ಸರಕಾರ (2015-2020)-9156 ಕೋಟಿ ರೂ.ಗಳು. ಕಾಂಗ್ರೆಸ್ ಈಗ ಯಾರಿಗೂ ಬೇಡವಾಗಿದೆ, ಅದಕ್ಕಾಗಿ ಬೀದಿಬದಿ ಹೋರಾಟ ಮಾಡುವ ಡ್ರಾಮಾ ಕಂಪನಿ ಸೃಷ್ಟಿಸಿಕೊಂಡಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.
ಯುಪಿಎ ಸರಕಾರ 2004 ರಿಂದ 2014ರವರೆಗೆ ಅಧಿಕಾರದಲ್ಲಿದ್ದು, ರಾಜ್ಯದಿಂದ ಕೇಳಿದ್ದು ಕೇಳಿದ್ದು 44,542 ಕೋಟಿ ರೂ., ಅವರು ನಮ್ಮ ರಾಜ್ಯಕ್ಕೆ ನೀಡಿದ್ದು 4,462 ಕೋಟಿ ರೂ.ಗಳು. ಅಂದರೆ ಒಟ್ಟು ಪ್ರಸ್ತಾವನೆಯ ಕೇವಲ ಶೇ.10ರಷ್ಟು ಮಾತ್ರ ಮಂಜೂರು ಎಂದು ಬಿಜೆಪಿ ತಿಳಿಸಿದೆ.
ಮೋದಿ ಸರಕಾರಕ್ಕೆ 2014 ರಿಂದ 2019ರವರೆಗೆ ರಾಜ್ಯ ಸರಕಾರ ಕೇಳಿದ್ದು 27,208 ಕೋಟಿ ರೂ.ಗಳನ್ನು. ಅವರು ನೀಡಿದ್ದು 9,156 ಕೋಟಿ ರೂ.ಗಳನ್ನು. ಅಂದರೆ ಒಟ್ಟು ಪ್ರಸ್ತಾವನೆಯ ಶೇ.34ರಷ್ಟು ಮಂಜೂರು ಮಾಡಿದೆ. ಕಾಂಗ್ರೆಸ್‍ನವರೇ ನೀವು ರಾಜ್ಯದಲ್ಲಿ ನಾಮಾವಶೇಷವಾಗುವ ದಿನ ದೂರವಿಲ್ಲ ಎಂದು ಬಿಜೆಪಿ ಎಚ್ಚರಿಸಿದೆ.