ಮೇಲ್ಮನೆಯಲ್ಲಿ ಕೋಲಾಹಲ: ಸದನದಲ್ಲೇ ಆಹೋರಾತ್ರಿ ಧರಣಿ ನಡೆಸಲು ಕಾಂಗ್ರೆಸ್ ತೀರ್ಮಾನ
Update: 2020-12-15 15:32 IST
ಬೆಂಗಳೂರು: ವಿಧಾನಪರಿಷತ್‌ನಲ್ಲಿ ನಡೆದ ಗದ್ದಲ, ಕೋಲಾಹಲಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪರಿಷತ್ ನಲ್ಲೇ ಆಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ.
ಬೆಳಗ್ಗೆ ಸಭಾಪತಿ ಪೀಠದ ಬಳಿ ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ ಬಿಜೆಪಿ- ಜೆಡಿಎಸ್ ನಿಯೋಗವು ಈಗಾಗಲೇ ರಾಜ್ಯಪಾಲ ವಜುಭಾಯಿ ಅವರಿಗೆ ದೂರು ನೀಡಿದೆ. ಈ ನಡುವೆ ಕಾಂಗ್ರೆಸ್ ವಿಧಾನಪರಿಷತ್ ನಲ್ಲೇ ಮಧ್ಯರಾತ್ರಿವರೆಗೂ ಧರಣಿ ನಡೆಸಲು ತೀರ್ಮಾನಿಸಿದೆ.
ಇಂದು ವಿಶೇಷ ಅಧಿವೇಶನ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಆಸನದಲ್ಲಿ ಉಪ ಸಭಾಪತಿ ಧರ್ಮೆಗೌಡ ಆಸೀನರಾಗಿದ್ದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದರು. ಈ ವೇಳೆ ಪೀಠದ ಮುಂದೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಜಮಾಯಿಸಿದರು. ಈ ವಿಚಾರವಾಗಿ ಗದ್ದಲ ಏರ್ಪಟ್ಟು ಉಪ ಸಭಾಪತಿಯನ್ನು ಕಾಂಗ್ರೆಸ್ ಸದಸ್ಯರು ಪೀಠದಿಂದ ಬಲವಂತವಾಗಿ ಕೆಳಗಿಳಿಸಿದರು. ಅಲ್ಲದೆ ಕಾಂಗ್ರೆಸ್ ಸದಸ್ಯ ಚಂದ್ರಶೇಖರ್ ಪಾಟೀಲ್ ಅವರನ್ನು ಬಲವಂತವಾಗಿ ಪೀಠದಲ್ಲಿ ಕೂರಿಸಿದ್ದರು.