ನೌಕರರ ಮುಷ್ಕರದಿಂದ ಸಾರಿಗೆ ನಿಗಮಗಳಿಗೆ 60 ಕೋಟಿ ರೂ. ನಷ್ಟ !
Update: 2020-12-15 19:49 IST
ಬೆಂಗಳೂರು, ಡಿ.15: ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಸಾರಿಗೆ ಸಿಬ್ಬಂದಿಯು ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದರಿಂದ ಸಾರಿಗೆ ನಿಗಮಗಳಿಗೆ ಸುಮಾರು 60 ಕೋಟಿ ರೂ.ಗಳಷ್ಟು ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.
ಕೆಎಸ್ಸಾರ್ಟಿಸಿಗೆ 20 ಕೋಟಿ ರೂ. ಮತ್ತು ಬಿಎಂಟಿಸಿಗೆ ಸುಮಾರು 12 ಕೋಟಿ ರೂ.ಗಳಷ್ಟು ಆದಾಯಕ್ಕೆ ಹೊಡೆತ ಬಿದ್ದಿದೆ. ಅಲ್ಲದೆ, ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ 64 ಬಸ್‍ಗಳಿಗೆ ಹಾನಿಯಾಗಿದೆ. 20 ಬಿಎಂಟಿಸಿ ಬಸ್‍ಗಳಾಗಿದ್ದರೆ, 44 ಕೆಎಸ್ಸಾರ್ಟಿಸಿ ಬಸ್‍ಗಳಾಗಿವೆ.