ಶಿಕ್ಷಣ ಸಚಿವರ ಭರವಸೆ ಸಾಲದು, ಅಧಿಕೃತ ಪತ್ರ ಬಂದರೆ ಸತ್ಯಾಗ್ರಹ ಹಿಂದಕ್ಕೆ: ಜಿ.ಆರ್.ಭಟ್

Update: 2020-12-16 15:43 GMT

ಧಾರವಾಡ, ಡಿ.16: ಶಿಕ್ಷಣ ಹಾಗೂ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸತತ 12 ದಿನಗಳಿಂದ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಆಶ್ರಯದಲ್ಲಿ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯಲು ಶಿಕ್ಷಣ ಸಚಿವರ ಅಧಿಕೃತ ಪತ್ರ ಬಂದರೆ ಮಾತ್ರ ಸಾಧ್ಯ ಎಂದು ಪ್ರಧಾನ ಕಾರ್ಯದರ್ಶಿ ಜಿ.ಆರ್.ಭಟ್ ಹೇಳಿದ್ದಾರೆ.

ಶಿಕ್ಷಕರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಶಿಕ್ಷಣ ಸಚಿವರಿಗೆ ಒತ್ತಾಯ ಮಾಡಿದರು. ಸಭೆಯಲ್ಲಿ ಶಿಕ್ಷಣ ಸಚಿವರು ಎಲ್ಲ ಹದಿಮೂರು ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಮೂರು ತಿಂಗಳೊಳಗಾಗಿ ಈಡೇರಿಸುವ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಆದರೆ, ನಮ್ಮೆಲ್ಲರಿಗೆ ತೃಪ್ತಿ ತಂದಿಲ್ಲ. ಸರಕಾರಿ ಆದೇಶ ಬರುವವರೆಗೆ ಹೋರಾಟವನ್ನು ಮುಂದುವರೆಸುವ ಆಲೋಚನೆಯಲ್ಲಿದ್ದೇವೆ. ಡಿ.17ರಂದು ಬಸವರಾಜ ಹೊರಟ್ಟಿಯವರ ಜೊತೆಗೆ ಸಮಾಲೋಚಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಎಂದರು.

ಇಂದಿನ ಸತ್ಯಾಗ್ರಹದಲ್ಲಿ ಹೋರಾಟದ ಕುರಿತು ಹಾಗೂ ಸರಕಾರ ನೀಡಿದ ಭರವಸೆಯ ಮೇಲೆ ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ಬಸವರಾಜ ಧಾರವಾಡ, ಎಸ್.ಎಂ.ಅಂಗಡಿ, ಎಸ್.ಎಸ್.ಅಂಗಡಿ, ಜಿಲ್ಲಾಧ್ಯಕ್ಷ ವ್ಹಿ.ಎಸ್.ಹುದ್ದಾರ, ಜಿ.ಆರ್.ಭಟ್, ಖ್ಯಾತ ನ್ಯಾವಾದಿ ನೀರಲಕೇರಿ ಮತ್ತು ಚಾಮರಾಜನಗರ, ನಂಜನಗೂಡು, ಮೈಸೂರು, ಮಂಡ್ಯ, ರಾಮನಗರ, ಬೀದರ, ಬೆಳಗಾವಿ, ಚಿಕ್ಕೋಡಿ, ಶಿರಸಿ ಶೈಕ್ಷಣಿಕ ಜಿಲ್ಲೆ, ಬೆಂಗಳೂರು ಜಿಲ್ಲೆಗಳಿಂದ ಅಸಂಖ್ಯಾತ ಶಿಕ್ಷಕ ಶಿಕ್ಷಕಿಯರು ಆಡಳಿತ ಮಂಡಳಿಗಳ ಸದಸ್ಯರು, ಮಾಧ್ಯಮಿಕ ಶಾಲಾ ನೌಕರರ ಸಂಘದ ವಿವಿಧ ಹಂತಗಳ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News