ಪ್ರತಿಪಕ್ಷಗಳ ಎದುರಿಸಲಾಗದೆ ಬಿಜೆಪಿ ಸರಕಾರದ ಪಲಾಯನ: ಕಾಂಗ್ರೆಸ್ ಟೀಕೆ
Update: 2020-12-16 22:55 IST
ಬೆಂಗಳೂರು, ಡಿ.16: ಚುನಾವಣಾ ಸಮಾವೇಶ ನಡೆಸಲು ಕೋವಿಡ್ ಅಡ್ಡಿ ಇಲ್ಲ. ಪಶ್ಚಿಮ ಬಂಗಾಳದಲ್ಲಿ ಸರಕಾರದ ವಿರುದ್ಧ ಹೋರಾಡಲು ಕೋವಿಡ್ ಭಯ ಇಲ್ಲ. ಉಪ ಚುನಾವಣೆ ನಡೆಸಲು ಕೋವಿಡ್ ಆತಂಕವಿಲ್ಲ. ರೈತರು ಹಾಗೂ ಜನ ಸಾಮಾನ್ಯರ ಸಮಸ್ಯೆ ಬಗ್ಗೆ ಚರ್ಚಿಸಲು ಕೋವಿಡ್ ನೆಪ ಯಾಕೆ? ಪ್ರತಿಪಕ್ಷಗಳ ಎದುರಿಸಲಾಗದೆ 56 ಇಂಚಿನ ಎದೆಯ ಕೇಂದ್ರ ಬಿಜೆಪಿ ಸರಕಾರ ಪಲಾಯನ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಟೀಕಿಸಿದೆ.