ವಿಧಾನಪರಿಷತ್ ಲ್ಲಿ ನಡೆದ ಘಟನೆಗೆ ಮೂರು ಪಕ್ಷಗಳು ಕಾರಣ: ಸಚಿವ ಕೋಟಾ ಪೂಜಾರಿ
Update: 2020-12-16 23:42 IST
ಮೈಸೂರು,ಡಿ.16: ಪ್ರಜಾಪ್ರಭುತ್ವದ ದೇವಾಲಯಲ್ಲಿ ನಿನ್ನೆ ನಡೆದ ಘಟನೆ ಅವಮಾನಕರ. ಈ ಘಟನೆಗೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸೇರಿದಂತೆ ಮೂರು ಪಕ್ಷಗಳು ಕಾರಣ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದಲ್ಲಿ ನಡೆಯತ್ತಿರುವ ಹಿಂದುಳಿದ ವರ್ಗಗಳ ರಾಜ್ಯಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ಬುಧವಾರ ಮೈಸೂರಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಇತಿಹಾಸ ಇರುವ ವಿಧಾನಪರಿಷತ್ ನಲ್ಲಿ ನಡೆದ ಘಟನೆ ನನಗೆ ಅತೀವ ನೋವುಂಟು ಮಾಡಿದೆ. ಇಂತಹ ಘಟನೆ ನಡೆಯಬಾರದಿತ್ತು. ಇದು ಇಷ್ಟಕ್ಕೆ ಸುಖಾಂತ್ಯ ಕಾಣಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ಡಿ.ಎಚ್.ಶಂಕರಮೂರ್ತಿ ಸಭಾಪತಿಗಳಾಗಿದ್ದ ವೇಳೆ ಕಾಂಗ್ರೆಸ್ ನವರು ಅವಿಶ್ವಾಸ ತಂದು ಮತಕ್ಕೆ ಹಾಕಿದ್ದರು. ಈಗಲೂ ಅಂತಹದಕ್ಕೆ ಅವಕಾಶ ನೀಡಬಹುದಿತ್ತು. ಆದರೆ ಕಾಂಗ್ರೆಸ್ ನವರು ನಡೆದುಕೊಂಡ ರೀತಿ ಸರಿ ಇರಲಿಲ್ಲ ಎಂದು ಹೇಳಿದರು.