ವಿಧಾನಪರಿಷತ್‍ ಘಟನೆ ಖಂಡಿಸಿ ನಾಯಿಗಳ ಮೆರವಣಿಗೆ ಮಾಡಿದ ವಾಟಾಳ್ ನಾಗರಾಜ್

Update: 2020-12-17 16:41 GMT

ಬೆಂಗಳೂರು, ಡಿ.17: ಮೇಲ್ಮನೆಯಲ್ಲಿ ಸದಸ್ಯರು ನಡೆದುಕೊಂಡು ವೈಖರಿಯನ್ನು ಖಂಡಿಸಿ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ನಗರದಲ್ಲಿಂದು ನಾಯಿಗಳ ಮೇಲೇರಿ ಮೆರವಣಿಗೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಜಮಾಯಿಸಿದ ಹಲವು ಕನ್ನಡಪರ ಸಂಘಟನೆಯ ಕಾರ್ಯಕರ್ತರು, ಚಿಂತಕರ ಚಾವಡಿ ಎಂದೇ ಖ್ಯಾತಿಯಾಗಿರುವ ವಿಧಾನಪರಿಷತ್‍ನಲ್ಲಿ ಸದಸ್ಯರು ನಡೆದುಕೊಂಡ ಘಟನೆಯನ್ನು ಖಂಡಿಸಿದರು. ಗೌರವಯುತವಾದ ಸದನಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಚಿಂತಕರ ಚಾವಡಿ ಎಂದೇ ಹೆಸರು ಪಡೆದುಕೊಂಡಿರುವ ಮೇಲ್ಮನೆಯಲ್ಲಿ ಸದಸ್ಯರು ನಡೆದುಕೊಂಡಿರುವ ಪರಿ ಇಡೀ ಸದನಕ್ಕೆ ಒಂದು ಕಪ್ಪುಚುಕ್ಕೆಯಾಗಿದೆ. ಮಾನ, ಮಾರ್ಯಾದೆ, ಗೌರವ ಇದ್ದರೆ ಎಲ್ಲಾ ವಿಧಾನಪರಿಷತ್ ಸದಸ್ಯರು ಕೂಡಲೇ ರಾಜೀನಾಮೆ ಕೊಡಬೇಕು. ಎಳೆದಾಟ, ಕೂಗಾಟ ಸಭಾಪತಿ ಪೀಠದ ಮುತ್ತಿಗೆ, ಸಭಾಪತಿಯವರನ್ನು ಅಕ್ರಮವಾಗಿ ಬಂಧಿಸಿ ಪ್ರಜಾಪ್ರಭುತ್ವದ ಮಾನ ಗೌರವ ಹರಾಜು ಹಾಕಿದ್ದಾರೆ. ಇವರಿಗೆ ಒಂದು ನಿಮಿಷವೂ ಸದನದಲ್ಲಿರಲು ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News