ಹಸಿರು ಇಂಧನ ಪರಿವರ್ತನೆ ಹೆಚ್ಚಿಸಲು 386 ದಶಲಕ್ಷ ಡಾಲರ್ ಹೂಡಿಕೆ: ಬ್ರಿಟನ್ ವಿದೇಶಾಂಗ ಸಚಿವ ಡೊಮಿನಿಕ್ ರಾಬ್
ಬೆಂಗಳೂರು, ಡಿ.17: ಹವಾಮಾನ ಬದಲಾವಣೆ ಮತ್ತು ಶಿಕ್ಷಣ ಸಹಯೋಗವನ್ನು ಹೆಚ್ಚಿಸಲು ಬ್ರಿಟನ್‍ನ ವಿದೇಶಾಂಗ ಸಚಿವ ಡೊಮಿನಿಕ್ ರಾಬ್ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಹಸಿರು ಇಂಧನ ಪರಿವರ್ತನೆಯನ್ನು ಹೆಚ್ಚಿಸಲು ಬ್ರಿಟನ್‍ನ CDC ಹಾಗು ಭಾರತದ NIIT (ನ್ಯಾಷನಲ್ ಇನ್ವೆಸ್ಟ್‍ಮೆಂಟ್ ಹಾಗು ಇನ್ಫ್ರಾಸ್ಟ್ರಕ್ಚರ್ ಫಂಡ್) 386 ದಶಲಕ್ಷ ಡಾಲರ್ ಹೂಡಿಕೆಯನ್ನು ಘೋಷಿಸಿದೆ. ಹಸಿರು ಚೇತರಿಕೆಗೆ ಬೆಂಬಲ ನೀಡಲು ಯುಕೆ ಮತ್ತು ಭಾರತವು ಎನ್‍ಇಇವಿ ನಿಧಿಯಲ್ಲಿ 1.5 ದಶಲಕ್ಷ ಪೌಂಡ್ ಸಹ-ಹೂಡಿಕೆ ಮಾಡಲಿದೆ.
ಡೊಮಿನಿಕ್ ರಾಬ್ ತಮ್ಮ ಮೂರು ದಿನದ ಭಾರತದ ಭೇಟಿಯ ಕಡೆಯ ದಿನವಾದ ಇಂದು ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ, ಸಾಂಕೇತಿಕವಾಗಿ ಬ್ರಿಟನ್ ಹಾಗು ಭಾರತದ ಪಾಲುದಾರಿಕೆ (ಹವಾಮಾನ ಬದಲಾವಣೆಯ) ಬಗ್ಗೆ ಬೆಂಗಳೂರಿನಲ್ಲಿ ಸೂಚಿಸಿದರು. ಡೊಮಿನಿಕ್ ರಾಬ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಉನ್ನತ ಶಿಕ್ಷಣ, ವ್ಯಾಪಾರ ಹಾಗು ಹೂಡಿಕೆಗಳ ಬಗ್ಗೆ, ಯುಕೆ-ಕರ್ನಾಟಕ ರಾಜ್ಯದ ಲಿಖಿತ ದಾಖಲೆಯನ್ನು ಉನ್ನತ ಶಿಕ್ಷಣ ಹಾಗು ವಿದ್ಯಾರ್ಥಿ ವಿನಿಮಯ ಕುರಿತು ಗಮನ ಹರಿಸಿದರು.
ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್‍ನಲ್ಲಿ ಸುಷಿರತೆ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಯುಕೆ-ಭಾರತ ಪಾಲುದಾರಿಕೆ, ಶುದ್ಧ ಹಾಗು ಹಸಿರು ಭೂಮಿ ವಾತಾವರಣವನ್ನು ಮಾಡಿಸುವ ಮೂಲಕ NEEV Fund ಅಡಿಯಲ್ಲಿ ನಮ್ಮ ಜಂಟಿ ಹೂಡಿಕೆ ಎಲ್ಲ ಉದ್ಯಮಿಗಳಿಗೆ ಸಹಾಯವಾಗುವುದು. ಈ ಸಹಯೋಗವು ಈಗಾಗಲೇ ಜಾರಿಗೆ ಬಂದು ಉದ್ಯಮಿಗಳು ಇದರ ಉಪಯೋಗವನ್ನು ಪಡೆಯುತ್ತಿರುವ ಮಾರ್ಗದಲ್ಲಿದ್ದು ಹಾಗು ‘ಬ್ಲೂ ಪ್ಲಾನೆಟ್' ಅಂತಹ ಪ್ರಾಜೆಕ್ಟ್ ‘ಪರಿಸರ ಸ್ನೇಹಿ'ಯಾಗಿ ತ್ಯಾಜ್ಯ ನಿರ್ವಹಣೆ ಮತ್ತು ಡೀಸೆಲ್ ಜನರೇಟರ್ ನಿಂದ ಬರುವ ಮಾಲಿನ್ಯವನ್ನು ತಡೆಗಟ್ಟುವ ಶ್ರಮವನ್ನು ಕೈಗೊಳ್ಳುತ್ತಿದೆ’ ಎಂದರು.