×
Ad

ಡಿ.20ಕ್ಕೆ ಕುಂಬಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸರ್ವಸದಸ್ಯರ ಸಭೆ

Update: 2020-12-17 23:44 IST

ಬೆಂಗಳೂರು, ಡಿ.17: ಕರ್ನಾಟಕ ರಾಜ್ಯ ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಡಿ.20ರ ಬೆಳಗ್ಗೆ 10:30ಕ್ಕೆ ನಗರದ ಕೆ.ಆರ್.ವೃತ್ತದಲ್ಲಿರುವ ಕರ್ನಾಟಕ ಇಂಜಿನಿಯರ್ಸ್ ಭವನದಲ್ಲಿ ಸಂಘದ 2019-20ನೆ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಏರ್ಪಡಿಸಲಾಗಿದೆ.

ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯನ್ವಯ ಎಲ್ಲರೂ ಕಡ್ಡಾಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಹಾಗೂ ವ್ಯಕ್ತಿಗತ ಅಂತರ ಕಾಯ್ದುಕೊಂಡು ಸದಸ್ಯರೆಲ್ಲರ ವಾರ್ಷಿಕ ಮಹಾಸಭೆ ಜರುಗಲಿದೆ ಎಂದು ತಿಳಿಸಲಾಗಿದೆ.

ಅಂದು ಮಧ್ಯಾಹ್ನ 2:30ಕ್ಕೆ ಪ್ಯಾನಲ್ ಚರ್ಚೆ ಝೂಮ್ ಮೂಲಕ ಏರ್ಪಡಿಸಲಾಗಿದೆ. ಮೀಟಿಂಗ್ ಐಡಿ-787 9588 2292, ಪಾಸ್ ಕೋಡ್-6 ಸಿಜಿಯುಎಲ್‍ಟಿ ಎಂದು ನಮೂದಿಸಿ ಝೂಮ್ ಸಭೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಾಬು ಎಸ್.ಕುಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News