ಬಿಜೆಪಿ ಬಯಸಿದ ರಾಜ್ಯದಲ್ಲಿ ಮಾತ್ರ ಗೋ ಮಾತೆ, ಉಳಿದ ಕಡೆಯಲ್ಲಿಲ್ಲ ಅವರ ಕ್ಯಾತೆ: ಕಾಂಗ್ರೆಸ್ ಟೀಕೆ
ಬೆಂಗಳೂರು, ಡಿ.18: ಗೋವುಗಳು ಬಿಜೆಪಿ ಬಯಸಿದ ರಾಜ್ಯಗಳಲ್ಲಿ ಮಾತ್ರ ಮಾತೆ, ಉಳಿದ ಕಡೆಯಲ್ಲಿಲ್ಲ ಅವರ ಕ್ಯಾತೆ! ಮೋದಿ ಆಳ್ವಿಕೆಯಲ್ಲಿ ಬೀಫ್ ರಫ್ತಿನಲ್ಲಿ ಭಾರತ ಉತ್ತುಂಗಕ್ಕೇರಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಗೋವಾದ ಬಿಜೆಪಿ ಸರಕಾರ ಗೋಮಾಂಸದ ಕೊರತೆ ನೀಗಿಸಲು ರಾಜ್ಯದಿಂದಾಗುವ ಪೂರೈಕೆಯ ಕಡೆ ಆಸೆಯಿಂದ ನೋಡುತ್ತಿದೆ. ಇದಕ್ಕೆ ಕರ್ನಾಟಕ ಬಿಜೆಪಿಯ ಅಭಿಪ್ರಾಯ ಮತ್ತು ಉತ್ತರ ಏನು? ಎಂದು ಪ್ರಶ್ನಿಸಿದೆ.
ಗೋವಾದಲ್ಲಿ ಬೀಫ್ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಈ ಕೊರತೆಯನ್ನು ನೀಗಿಸಲು ಕರ್ನಾಟಕದಿಂದ ಬೀಫ್ ಪೂರೈಸಲಾಗುವುದು ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿರುವುದನ್ನು ಉಲ್ಲೇಖಿಸಿ ಕಾಂಗ್ರೆಸ್ ಈ ಟ್ವೀಟ್ ಪ್ರಹಾರ ನಡೆಸಿದೆ.
ಗೋವುಗಳು @BJP4India
— Karnataka Congress (@INCKarnataka) December 18, 2020
ಬಯಸಿದ ರಾಜ್ಯಗಳಲ್ಲಿ ಮಾತ್ರ ಮಾತೆ!
ಉಳಿದ ಕಡೆಯಲ್ಲಿಲ್ಲ ಅವರ ಕ್ಯಾತೆ!
●ಮೋದಿ ಆಳ್ವಿಕೆಯಲ್ಲಿ ಬೀಫ್ ರಫ್ತಿನಲ್ಲಿ ಭಾರತ ಉತ್ತುಂಗಕ್ಕೇರಿದೆ
●ಗೋವಾದ ಬಿಜೆಪಿ ಸರ್ಕಾರ ಗೋಮಾಂಸದ ಕೊರತೆ ನೀಗಿಸಲು ರಾಜ್ಯದಿಂದಾಗುವ ಪೂರೈಕೆಯ ಕಡೆ ಆಸೆಯಿಂದ ನೋಡುತ್ತಿದೆ!
ಇದಕ್ಕೆ @BJP4Karnataka ಅಭಿಪ್ರಾಯ ಮತ್ತು ಉತ್ತರ ಏನು ? pic.twitter.com/w0OnGd0se2