×
Ad

ಲ್ಯಾಂಡ್ ಆರ್ಮಿ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ: ದಾಖಲೆಗಳ ಪರಿಶೀಲನೆ

Update: 2020-12-18 19:48 IST

ಹಾಸನ, ಡಿ.18: ಅಕ್ರಮ ಆಸ್ತಿ ಗಳಿಕೆ ದೂರು ಬಂದ ಹಿನ್ನಲೆಯಲ್ಲಿ ಲ್ಯಾಂಡ್ ಆರ್ಮಿ ಇಂಜಿನಿಯರ್ ಮನೆ ಹಾಗೂ ಕುಟುಂಬದವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ಅಕ್ರಮವಾಗಿ ಆಸ್ತಿ ಗಳಿಸಲಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಶುಕ್ರವಾರ ಬೆಳಿಗ್ಗಿನ ಜಾವ ಕೆಆರ್ ಡಿಸಿಎಲ್ (ಭೂ ಸೇನಾ) ಇಂಜಿನಿಯರ್ ಅಶ್ವಿನಿ ಮನೆ ಮತ್ತು ವಿದ್ಯಾನಗರದಲ್ಲಿರುವ ಅವರ ತಂದೆ ಮನೆ ಮತ್ತು ಲ್ಯಾಂಡ್ ಆರ್ಮಿ ಕಚೇರಿ ಸೇರಿ ಮೂರು ಕಡೆ ಸಂಬಂಧಿಕರ ಮನೆ ಮೇಲೆ ಎಸಿಬಿ ಹಾಸನ ವಿಭಾಗದ ಡಿವೈಎಸ್ಪಿ ಕೃಷ್ಣಮೂರ್ತಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಅಶ್ವಿನಿ ಹಾಸನದಲ್ಲಿ ಹಲವರು ವರ್ಷಗಳಿಂದ ಲ್ಯಾಂಡ್ ಆರ್ಮಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಇವರು ಮೂಲತ ಚನ್ನರಾಯಪಟ್ಟಣ ತಾಲೂಕಿನ ವಳಗೆರಳ್ಳಿ ಗ್ರಾಮದವರಾಗಿದ್ದು, ಹಾಸನ ನಗರದ ಗೌರಿಕೊಪ್ಪಲಿನಲ್ಲಿ ವಾಸವಾಗಿರುವ ಅರವಿಂದ್ ಎಂಬುವರನ್ನು ಮದುವೆಯಾಗಿದ್ದರು. ಅರವಿಂದ್ ರವರು ಎರಡು ಜಿಲ್ಲೆಯಲ್ಲಿ ಸಿಮೆಂಟ್ ಏಜೆನ್ಸಿ ವ್ಯವಹಾರ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News