×
Ad

ಡಿ.21ರಿಂದ ಆನ್‍ಲೈನ್–ಆಫ್ ಲೈನ್ ತರಗತಿಗಳು ಬಂದ್: ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ

Update: 2020-12-20 20:01 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.20: ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ವಿಧಿಸಿರುವ ನಿಯಮ ಹಿಂಪಡೆಯುವಿಕೆ, ಖಾಸಗಿ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಳಿಗೆ ಒತ್ತಾಯಿಸಿ ನಾಳೆ(ಡಿ.21)ಯಿಂದ ಆನ್‍ಲೈನ್, ಆಪ್‍ಲೈನ್ ತರಗತಿಗಳನ್ನು ಬಂದ್ ಮಾಡುತ್ತಿದ್ದೇವೆಂದು ಖಾಸಗಿ ಶಾಲೆಗಳ ಒಕ್ಕೂಟ(ರುಪ್ಸಾ)ದ ಅಧ್ಯಕ್ಷ ಲೋಕೇಶ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಖಾಸಗಿ ಶಾಲೆಗಳ ಒಕ್ಕೂಟದಿಂದ ರಾಜ್ಯ ಸರಕಾರಕ್ಕೆ ಒಟ್ಟು 15ಬೇಡಿಕೆಗಳನ್ನು ಇಟ್ಟಿದ್ದೇವೆ. ಇದನ್ನು ಬಗೆ ಹರಿಸುವವರೆಗೆ ಧರಣಿ, ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದೇವೆಂದು ತಿಳಿಸಿದರು.

ಕೋವಿಡ್‍ನಿಂದ ಸಂಕಷ್ಟ ಅನುಭವಿಸುತ್ತಿರುವ ಖಾಸಗಿ ಶಾಲೆಗಳಿಗೆ ಪರಿಹಾರ ನೀಡುವಂತೆ ಕೇಳಿದವು. ಆದರೆ, ರಾಜ್ಯ ಸರಕಾರ ಇದನ್ನು ಸಂಪೂರ್ಣವಾಇ ನಿರ್ಲಕ್ಷ್ಯವಹಿಸುತ್ತಿದೆ. ನಮ್ಮ ಯಾವ ಬೇಡಿಕೆಗಳನ್ನು ಶಿಕ್ಷಣ ಸಚಿವರು ಸಕಾರಾತ್ಮಕವಾಗಿ ಈಡೇರಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ನಾಳೆಯೇ ಸಚಿವ ಸುರೇಶ್‍ಕುಮಾರ್ ರಿಗೆ ನಮ್ಮ ಬೇಡಿಕೆಗಳ ಪ್ರತಿ ಕೊಟ್ಟು, ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡುತ್ತೇವೆ. ಅವರು ನಿರ್ಲಕ್ಷ್ಯ ವಹಿಸಿದರೆ ಹಂತ, ಹಂತವಾಗಿ ಹೋರಾಟವನ್ನು ತೀವ್ರಗೊಳಿಸಲಾಗುವುದು.  ಹಾಗೂ ನ್ಯಾಯಾಲಯಕ್ಕೆ ಹೋಗಲಿದ್ದೇವೆಂದು ಅವರು ಹೇಳಿದ್ದಾರೆ.

ಶಿಕ್ಷಣ ಸಚಿವ ಸುರೇಶ್‍ ಕುಮಾರ್ ರವರ ಗೊಂದಲಕಾರಿ ನೀತಿಯಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರ ನಡುವೆ ಭಿನ್ನಾಭಿಪ್ರಾಯ ಮೂಡುವಂತಾಗಿದೆ. ಸಚಿವ ಸುರೇಶ್‍ ಕುಮಾರ್ ಪದೇ ಪದೇ ತಮ್ಮ ಹೇಳಿಕೆಗಳನ್ನು ಬದಲಿಸುವ ಮೂಲಕ ಇಡೀ ಶಿಕ್ಷಣ ಕ್ಷೇತ್ರವನ್ನು ಸಮಸ್ಯಾತ್ಮಕವಾಗಿ ಮಾಡಿದ್ದಾರೆ. ಇಂತಹ ಸಚಿವರು ನಮಗೆ ಅಗತ್ಯವಿಲ್ಲ.
-ಲೋಕೇಶ್, ರಾಜ್ಯಾಧ್ಯಕ್ಷ, ಖಾಸಗಿ ಶಾಲೆಗಳ ಒಕ್ಕೂಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News