ಅಕ್ರಮವಾಗಿ ಸಂಗ್ರಹಿಸಿಟ್ಟ ಲಕ್ಷಾಂತರ ರೂ. ಮೌಲ್ಯದ ಮರದ ತುಂಡುಗಳು ವಶ

Update: 2020-12-20 18:21 GMT

ಸೋಮವಾರಪೇಟೆ, ಡಿ.20: ಯಾವುದೇ ಪರವಾನಿಗೆ ಇಲ್ಲದೇ ಮನೆ ಯೊಳಗೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂ. ವೌಲ್ಯದ ಮರ ಗಳ ತುಂಡುಗಳನ್ನು ಅರಣ್ಯ ಇಲಾಖಾಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಪಟ್ಟಣ ಸಮೀಪದ ಹಾನಗಲ್ಲು ಗ್ರಾಮದಲ್ಲಿ ವರದಿಯಾಗಿದೆ.

ಹಾನಗಲ್ಲು ಗ್ರಾಮದ ಎಚ್.ವಿ.ಮಿಥುನ್ ಎಂಬವರ ಮನೆಯೊಳಗೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಹೊನ್ನೆ, ನಂದಿ, ಬೀಟೆ, ತೇಗ, ಅರಶಿಣ ತೇಗದ ಮರಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದು, ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಮಡಿಕೇರಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರ ನೇತೃತ್ವದಲ್ಲಿ ನಡೆದ ದಾಳಿ ಸಂದರ್ಭ, ಮನೆಯೊಳಗೆ ಸಂಗ್ರಹಿ ಸಿಟ್ಟಿದ್ದ 24 ಸಿಎಫ್‌ಟಿ ಬೀಟೆ, 71 ಸಿಎಫ್‌ಟಿ ನಂದಿ, 71 ಸಿಎಫ್‌ಟಿ ಹೊನ್ನೆ, 7 ಸಿಎಫ್‌ಟಿ ತೇಗ, 3 ಸಿಎಫ್‌ಟಿ ಅರಶಿಣ ತೇಗದ ಸೈಜ್ ಸೇರಿ ದಂತೆ ಒಟ್ಟು 176 ಸಿಎಫ್‌ಟಿ ಮರಗಳ ತುಂಡುಗಳನ್ನು ವಶಕ್ಕೆ ಪಡೆದು 2 ಪಿಕ್‌ಅಪ್ ಹಾಗೂ 2 ಟ್ರಾಕ್ಟರ್‌ನಲ್ಲಿ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಸಾಗಿಸಲಾಗಿದೆ.

ದೇವಾಲಯ ನಿರ್ಮಾಣದ ಕೆಲಸಕ್ಕೆ ಮರಗಳನ್ನು ಸಂಗ್ರಹಿಸಿಡಲಾಗಿದೆ. ಇವುಗಳಿಗೆ ಪರ್ಮಿಟ್ ಇದೆ ಎಂದು ಮಿಥುನ್ ಮಾಹಿತಿ ನೀಡಿದ್ದರು. ಆದರೆ, ಪರ್ಮಿಟ್ ಒದಗಿಸುವಲ್ಲಿ ವಿಫಲರಾದ ಹಿನ್ನೆಲೆ ಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎಸಿಎಫ್ ಕೊಚ್ಚೇರ ನೆಹರೂ, ಸೋಮವಾರಪೇಟೆ ಆರ್‌ಎಫ್‌ಒ ಎ.ಸುಮಂತ್, ಶನಿವಾರಸಂತೆಯ ಆರ್‌ಎಫ್‌ಒ ಪ್ರಪುಲ್ ಶೆಟ್ಟಿ, ಕುಶಾಲನಗರ ಆರ್‌ಎಫ್‌ಒ ಅನನ್ಯ ಕುಮಾರ್, ಬೇಳೂರು ಶಾಖೆಯ ಡಿಆರ್‌ಎಫ್‌ಒಗಳಾದ ನಾರಾಯಣ ಮೂಲ್ಯ, ರಾಕೇಶ್, ಅರಣ್ಯ ರಕ್ಷಕ ಮೋಹನ್‌ಕುಮಾರ್, ಸಿಬ್ಬಂದಿ ವಿಜಯ, ಸುಂದರ, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News