×
Ad

ಪ್ರವಾದಿ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ರುದ್ರೇಶ ಅಚಾರ್ಯ ಪ್ರಥಮ: ವಿಜೇತರಿಗೆ ಬಹುಮಾನ ವಿತರಣೆ

Update: 2020-12-21 23:43 IST

ಶಿವಮೊಗ್ಗ,ಡಿ.21: 'ಪ್ರವಾದಿ ಮುಹಮ್ಮದ್ (ಸ) ಮಾನವತೆಯ ಮಾರ್ಗದರ್ಶಕ' ಕುರಿತು ಆಯೋಜಿಸಿದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಇತ್ತೀಚೆಗೆ ಜಮಾಅತೆ ಇಸ್ಲಾಮೀ ಹಿಂದ್ ಶಾಖಾ ಕಚೇರಿಯ ಶಾಂತಿ ಸದನದಲ್ಲಿ ಬಹುಮಾನ ವಿತರಿಸಲಾಯಿತು. 

ಶಿವಮೊಗ್ಗದ ರುದ್ರೇಶ ಅಚಾರ್ಯ (ಪ್ರಥಮ ಬಹುಮಾನ- 10 ಸಾವಿರ), ಹೊಸನಗರದ ಕೆ.ಎಂ. ಸ್ನೇಹ (ದ್ವಿತೀಯ ಬಹುಮಾನ- 7 ಸಾವಿರ) ಹಾಗೂ ತೃತೀಯ ಬಹುಮಾನ 5 ಸಾವಿರ ವಿಜೇತರಾದ ಹೊಸಕೊಪ್ಪದ ಶ್ರೀಧರ್, ಕೆ. ಪುಟ್ಟಪ್ಪ ಹಾಗೂ ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಮಂಜುನಾಥ್, ಮುಹಮ್ಮದ್ ರಿಯಾಝ್‌ ರೋಣ, ಜಮಾತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮೌಲಾನ ಅಬ್ದುಲ್ಲ ಗಫಾರ್ ಹಾಮೀದ್ ಉಮರೀ, ಸ್ಥಾನೀಯ ಅಧ್ಯಕ್ಷ ಅಖೀಲ್ ಅಹಮ್ಮದ್ ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News