×
Ad

ಚಿಕ್ಕಮಗಳೂರು ಜಿಲ್ಲೆ: 9 ಗಂಟೆ ವೇಳೆ 8.54 ಶೇ. ಮತದಾನ

Update: 2020-12-22 10:59 IST

ಚಿಕ್ಕಮಗಳೂರು, ಡಿ.22: ಕಾಫಿನಾಡಿನಲ್ಲಿ ಗ್ರಾಪಂನಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಬೆಳಗ್ಗೆ ಕೊಪ್ಪ, ಮೂಡಿಗೆರೆ ಹಾಗೂ ಶೃಂಗೇರಿಯಲ್ಲಿ ಉತ್ತಮ ಮತದಾನವಾದರೆ, ಕಡೂರು ತಾಲೂಕು ವ್ಯಾಪ್ತಿಯಲ್ಲಿ ಕಡಿಮೆ ಮತದಾನವಾಗಿದೆ.

ಚಿಕ್ಕಮಗಳೂರು ತಾಲೂಕಿನಲ್ಲಿ 12.11 ಶೇ., ಅಜ್ಜಂಪುರ 7.15 ಶೇ., ಕಡೂರು 5.28 ಶೇ., ಕೊಪ್ಪ10.57 ಶೇ., ಮೂಡಿಗೆರೆ 10.39 ಶೇ., ಎನ್.ಆರ್.ಪುರ 9.54 ಶೇ., ಶೃಂಗೇರಿ 12.13 ಶೇ. ಹಾಗೂ ತರೀಕೆರೆಯಲ್ಲಿ 6.01 ಶೇ. ಸೇರಿದಂತೆ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆಯ ವೇಳೆ ಒಟ್ಟು 8.54 ಶೇ. ಹಕ್ಕು ಚಲಾವಣೆಯಾಗಿದೆ.

ತರೀಕೆರೆ ಶಾಸಕ ಡಿ.ಎಸ್.ಸುರೇಶ್ ದೋರನಾಳು ಮತಗಟ್ಟೆ ಸಂಖ್ಯೆ 41ಕ್ಕೆ ಕುಟುಂಬದೊಂದಿಗೆ ತೆರಳಿ ಮತದಾನ ಮಾಡಿದರು.ತೇಗೂರು ಗ್ರಾಪಂ ಮತಗಟ್ಟೆ ಸಂಖ್ಯೆ 90ಎನಲ್ಲಿ 95 ವರ್ಷದ ಹಿರಿಯ ಮಹಿಳೆ ಮಾಳಮ್ಮ ಆಗಮಿಸಿ ಮತದಾನ ಮಾಡಿದರು.

ಜಿಲ್ಲೆಯ 194 ಗ್ರಾಮ ಪಂಚಾಯತ್‌ಗಳಲ್ಲಿ ಒಟ್ಟು 5,290 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಜಿಲ್ಲೆಯ ಒಟ್ಟು 1,002 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News