ಶಿವಮೊಗ್ಗ: ಮತದಾರರಿಗೆ ಹಂಚಲು ಸಿದ್ಧಪಡಿಸಿದ್ದ ಪಲಾವ್ ವಶಕ್ಕೆ!
ಶಿವಮೊಗ್ಗ, ಡಿ.22: ಮತದಾರರಿಗೆ ಹಂಚಲು ಸಿದ್ಧಪಡಿಸುತ್ತಿದ್ದರೆನ್ನಲಾದ ಪಲಾವ್ ಅನ್ನು ಚುನಾವಣಾ ನೀತಿ ಸಂಹಿತೆ ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡ ಘಟನೆ ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪದ ಹೊಸಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಳ್ಳಿ ಗ್ರಾಮ ಪಂಚಾಯತ್ ಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ತಮ್ಮನ್ನು ಬೆಂಬಲಿಸಿದ ಮತದಾರರಿಗೆ ಪಲಾವ್ ಊಟ ರೆಡಿ ಮಾಡಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಚುನಾವಣಾಧಿಕಾರಿಗಳು,ಪಲಾವ್ ಮಾಡಲು ಬಳಸಿದ್ದ ಪಾತ್ರೆ ಹಾಗೂ ಸಿದ್ಧವಾಗಿದ್ದ ಪಲಾವ್ ವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ ಪಲಾವ್ ರೆಡಿ ಮಾಡುತ್ತಿದ್ದ ಮೂವತ್ತಕ್ಕೂ ಹೆಚ್ಚು ಜನ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸುಮಾರು 200ಕ್ಕೂ ಹೆಚ್ಚು ಜನರಿಗೆ ಪಲಾವ್, ಮೊಸರು ಬಜ್ಜಿ ಸಿದ್ಧ ಮಾಡಿಸಲಾಗಿತ್ತು.ಊಟ ತಯಾರಿಸಿದ ಅಭ್ಯರ್ಥಿಯ ಹೆಸರು ಪತ್ತೆಯಾಗಿಲ್ಲ .ಈ ಸಂಬಂದ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ಚಂದ್ರಪ್ಪ ತಿಳಿಸಿದ್ದಾರೆ.
ದಾಳಿಯಲ್ಲಿ ಚುನಾವಣಾಧಿಕಾರಿ ಚಂದ್ರಪ್ಪ,ಇಒ ಡಾ ಕಲ್ಲಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.