×
Ad

ಗ್ರಾ.ಪಂ. ಚುನಾವಣೆ: ಮತದಾನ ಕೇಂದ್ರಕ್ಕೆ ಪಿಸ್ತೂಲ್ ತಂದ ಮತಗಟ್ಟೆ ಅಧಿಕಾರಿ !

Update: 2020-12-22 19:33 IST

ಬೆಳಗಾವಿ, ಡಿ.22: ಬೆಳಗಾವಿ ಜಿಲ್ಲೆಯ ದೇಸನೂರ ಗ್ರಾಮದಲ್ಲಿ ಮೊದಲ ಹಂತದ ಗ್ರಾಪಂ ಚುನಾವಣೆ ನಡೆಯುತ್ತಿದ್ದಾಗ ಮತಗಟ್ಟೆ ಅಧಿಕಾರಿಯೊಬ್ಬರು ಮತದಾನ ಕೇಂದ್ರಕ್ಕೆ ಪಿಸ್ತೂಲ್ ತರುವ ಮೂಲಕ ಭಯದ ವಾತಾವರಣ ಸೃಷ್ಟಿಯಾಗುವಂತೆ ಮಾಡಿದ್ದಾರೆ.

ಮತಗಟ್ಟೆ ಅಧಿಕಾರಿಯಾಗಿರುವ ಸುಲೇಮಾನ್ ಸನದಿ ಮತಗಟ್ಟೆಗೆ ರಿವಾಲ್ವರ್ ತಂದವರು. ಅಷ್ಟೇ ಅಲ್ಲದೇ ಅವರು ಪಿಸ್ತೂಲ್ ಅನ್ನು ಎಲ್ಲರಿಗೂ ಕಾಣುವಂತೆ ಹಿಡಿದು ಭಯದ ವಾತಾವರಣ ಸೃಷ್ಟಿಸಿದರು.

ಕೂಡಲೇ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದ್ದು, ಗ್ರಾಮೀಣ ಠಾಣೆಯ ಇನ್‍ಸ್ಪೆಕ್ಟರ್ ಸುನೀಲ್ ನಂದೇಶ್ವರ್ ಸ್ಥಳಕ್ಕಾಗಮಿಸಿ ಅಧಿಕಾರಿ ಸನದಿ ಮತ್ತು ಅವರ ಬಳಿ ಇದ್ದ ಪಿಸ್ತೂಲ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪಿಸ್ತೂಲ್‍ಗೆ ಪರವಾನಗಿ ಇದ್ದು, ಅದು ಸರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮತಗಟ್ಟೆಗೆ ಪಿಸ್ತೂಲ್ ತಂದದ್ದೇಕೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಸನದಿ ವಿರುದ್ಧ ಶಿಸ್ತು ಕ್ರಮಕ್ಕೆ ಚುನಾವಣಾ ಅಧಿಕಾರಿಗಳು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News