ಪಿಎಚ್‍ಡಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Update: 2020-12-22 18:26 GMT

ಬೆಂಗಳೂರು, ಡಿ.22: ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ರಾಜ್ಯ, ಜಿಲ್ಲೆ, ತಾಲೂಕು ಗ್ಯಾಸೆಟಿಯರ್ ಸಂಪುಟಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಚಿಸಿ ಪ್ರಕಟಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಹೀಗಾಗಿ ಆಸಕ್ತ ಪಿಎಚ್‍ಡಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇಲಾಖೆಯು 2020-21ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲಾ ಗ್ಯಾಸೆಟಿಯರ್ ಗಳ ರಚನಾ ಕಾರ್ಯವನ್ನು ಹಮ್ಮಿಕೊಂಡಿದ್ದು, ಈ ಜಿಲ್ಲಾ ಗ್ಯಾಸೆಟಿಯರ್ ಗಳ ಅಧ್ಯಾಯಗಳನ್ನು ಸಂಶೋಧನಾ ಕಾರ್ಯದಲ್ಲಿ ಆಸಕ್ತಿಯುಳ್ಳ ಸ್ನಾತಕೋತ್ತರ ಪದವಿಯೊಂದಿಗೆ ಪಿಎಚ್‍ಡಿ ಮಾಡಿರುವ, ಅರ್ಹ ವ್ಯಕ್ತಿಗಳಿಂದ ರಚನಾ ಕಾರ್ಯದಲ್ಲಿ 5 ರಿಂದ 10 ವರ್ಷಗಳ ನಿರಂತರ ಅನುಭವ ಉಳ್ಳ ಹಾಗೂ ಸ್ಥಳೀಯ ಹಿನ್ನೆಲೆಯುಳ್ಳ ಸಂಪನ್ಮೂಲ ವ್ಯಕ್ತಿಗಳಿಂದ ಗ್ಯಾಸೆಟಿಯರ್‍ಗಳನ್ನು ರಚಿಸಲು ಉದ್ದೇಶಿಸಿದೆ.

ಆಸಕ್ತಿಯುಳ್ಳ ಸ್ನಾತಕೋತ್ತರ ಪದವಿಯೊಂದಿಗೆ ಪಿಎಚ್‍ಡಿ ಮಾಡಿರುವ ವ್ಯಕ್ತಿಗಳು ತಾವು ರಚಿಸಿರುವ ಪುಸ್ತಕಗಳ/ ಲೇಖನಗಳೊಂದಿಗೆ ಸ್ವವಿವರವನ್ನು ಈ ಕಚೇರಿಯ ಇ-ಮೇಲ್ ವಿಳಾಸ karnatakagazetteer@gmail.com  ಗೆ 15ದಿನಗಳೊಳಗಾಗಿ ಸಲ್ಲಿಸತಕ್ಕದ್ದು. ಸಂಪನ್ಮೂಲ ವ್ಯಕ್ತಿಗಳು ರಚಿಸಿರುವ, ಬರೆದಿರುವ ಲೇಖನಗಳು, ಪುಸ್ತಕಗಳು, ವಿಶ್ವವಿದ್ಯಾಲಯಗಳು ಪ್ರಕಟಿಸುವ ಜರ್ನಲ್ಸ್, ಪ್ರಸಾರಾಂಗಗಳಲ್ಲಿ ಪ್ರಕಟಿತಗೊಂಡಿರುವವರಿಗೆ ಆದ್ಯತೆ ನೀಡಲಾಗುವುದು.

ಆಯ್ಕೆಯಾದ ಲೇಖಕರಿಗೆ ಅಧ್ಯಾಯ ರಚನಾ ಕಾರ್ಯದಲ್ಲಿ ಸುಮಾರು 350 ರಿಂದ 400 ಪದಗಳ ಮಿತಿಗೊಳಪಟ್ಟ ಪುಟ ಒಂದಕ್ಕೆ 750ರೂ. ಗಳನ್ನು ಗೌರವ ಸಂಭಾವನೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮುಖ್ಯ ಸಂಪಾದಕರು, ಕರ್ನಾಟಕ ಗ್ಯಾಸೆಟಿಯರ್ ಇಲಾಖೆ, ಬೆಂಗಳೂರು ಇವರ ಕಚೇರಿಯ ದೂರವಾಣಿ ಸಂಖ್ಯೆ: 080-22213474 ಮೊ: 9980853108 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News