ಕರ್ನಾಟಕ ವೈದ್ಯಕೀಯ ಪರಿಷತ್‌ಗೆ ಮೇಲ್ವರ್ಗದ ಸದಸ್ಯರ ನೇಮಕ: ಅಧಿಸೂಚನೆ ವಾಪಸ್ ಪಡೆದ ರಾಜ್ಯ ಸರಕಾರ
ಬೆಂಗಳೂರು, ಡಿ.23: ಕರ್ನಾಟಕ ವೈದ್ಯಕೀಯ ಪರಿಷತ್‌ಗೆ ಐವರು ಮೇಲ್ವರ್ಗದ ಪುರುಷರನ್ನು ಸದಸ್ಯರನ್ನಾಗಿ ನೇಮಕಗೊಳಿಸಿ 2020ರ ಜ.20ರಂದು ಹೊರಡಿಸಿದ್ದ ಅಧಿಸೂಚನೆಯನ್ನು ವಾಪಸ್ ಪಡೆಯಲಾಗಿದೆ ಎಂದು ಹೈಕೋರ್ಟ್ ಗೆ ರಾಜ್ಯ ಸರಕಾರ ಹೇಳಿದೆ.
ಸರಕಾರದ ಅಧಿಸೂಚನೆ ಪ್ರಶ್ನಿಸಿ ಮಂಗಳೂರಿನ ತಜ್ಞ ವೈದ್ಯ ಡಾ.ಶ್ರೀನಿವಾಸ ಬಿ. ಕಕ್ಕಿಲ್ಲಾಯ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಬುಧವಾರ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು.
ಕರ್ನಾಟಕ ವೈದ್ಯಕೀಯ ಪರಿಷತ್‌ಗೆ ಮೇಲ್ವರ್ಗದ ಪುರುಷರನ್ನು ಸದಸ್ಯರನ್ನಾಗಿ ನೇಮಕಗೊಳಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ವಾಪಸ್ ಪಡೆದಿರುವ ಕುರಿತು ರಾಜ್ಯ ಸರಕಾರ ಸಲ್ಲಿಸಿದ ಮೊಮೊವನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿಯನ್ನು ಇತ್ಯರ್ಥಗೊಳಿಸಿತು.
ಅರ್ಜಿದಾರರ ಪರ ವಾದಿಸಿದ್ದ ವಕೀಲ ದೊರೆರಾಜ್ ಅವರು, ಕರ್ನಾಟಕ ವೈದ್ಯಕೀಯ ಪರಿಷತ್‌ಗೆ ಸದಸ್ಯರನ್ನಾಗಿ ನೇಮಕ ಮಾಡುವಾಗ ಮಹಿಳೆಯರು ಮತ್ತು ಇತರ ವರ್ಗದವರಿಗೂ ಪ್ರಾತಿನಿಧ್ಯ ನೀಡಬೇಕು ಎಂದು ವೈದ್ಯಕೀಯ ಪರಿಷತ್ ಕಾಯಿದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ, ಸರಕಾರ ವೈದ್ಯಕೀಯ ಪರಿಷತ್‌ಗೆ ಐವರು ಮೇಲ್ವರ್ಗದ ಪರುಷರನ್ನೆ ನೇಮಕ ಮಾಡಿ ಕಾಯಿದೆಯ ನಿಯಮಗಳನ್ನು ಉಲ್ಲಂಘಿಸಿದೆ. ಈ ಕೂಡಲೇ ಅಧಿಸೂಚನೆಯನ್ನು ರದ್ದುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದ್ದರು.
ಹೋರಾಟಕ್ಕೆ ಜಯ ಸಿಕ್ಕಿದೆ
‘ಕರ್ನಾಟಕ ವೈದ್ಯಕೀಯ ಪರಿಷತ್‌ಗೆ ಐವರು ಮೇಲ್ವರ್ಗದ ಪುರುಷರನ್ನು ಸದಸ್ಯರನ್ನಾಗಿ ನೇಮಕಗೊಳಿಸಿ ರಾಜ್ಯ ಸರಕಾರ 2020ರ ಜ.20ರಂದು ಹೊರಡಿಸಿದ್ದ ಅಧಿಸೂಚನೆಯನ್ನು ರಾಜ್ಯ ಸರಕಾರ ವಾಪಸ್ ಪಡೆದಿದೆ. ಸಾಮಾಜಿಕ ನ್ಯಾಯಕ್ಕಾಗಿ ನಾವು ನಡೆಸಿದ ಹೋರಾಟಕ್ಕೆ ಮತ್ತೊಂದು ಜಯ ಸಿಕ್ಕಿದೆ. ಸತ್ಯಕ್ಕಷ್ಟೇ ಗೆಲುವು ಎಂಬುದು ಮತ್ತೆ ಸಾಬೀತಾಗಿದೆ.’
-ಡಾ.ಶ್ರೀನಿವಾಸ ಬಿ. ಕಕ್ಕಿಲ್ಲಾಯ, ಅರ್ಜಿದಾರರು
ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ ರಾಜ್ಯ ಸರಕಾರವು ಮೇಲ್ವರ್ಗದ 5 ಪುರುಷರನ್ನು ಸದಸ್ಯರನ್ನಾಗಿ ನೇಮಿಸಿದ್ದ ಆಜ್ಞೆಯನ್ನು ನಾನು ರಾಜ್ಯ ಉಚ್ಚ...
Posted by Srinivas Kakkilaya on Wednesday, 23 December 2020