ಐಪಿಎಸ್ ಅಧಿಕಾರಿ ಡಿ.ರೂಪಾ ಹೆಸರಿನಲ್ಲಿ ಫೇಸ್‍ಬುಕ್‍ ಖಾತೆ ತೆರೆದು ವಂಚನೆ: ದೂರು ದಾಖಲು

Update: 2020-12-23 14:50 GMT

ಬೆಂಗಳೂರು, ಡಿ.23: ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ಹೆಸರಿನಲ್ಲಿ ಅಸ್ಸಾಂ ಮೂಲದ ವ್ಯಕ್ತಿಯೋರ್ವ ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಕೋಲಿನ್ ಸಿ.ಶರ್ಮಾ ಎಂಬಾತ ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ಸೃಷ್ಟಿಸಿ ಡಿ.ರೂಪಾ ಅವರ ಫೋಟೋ ಬಳಸಿದ್ದಾನೆ ಎನ್ನಲಾಗಿದೆ. 

ನಕಲಿ ಖಾತೆ ಮೂಲಕ ಹಲವು ಜನರಿಗೆ ಸಂದೇಶ ಕಳುಹಿಸಿ ನಾನು ಅಸ್ಸಾಂ ಸಿವಿಲ್‍ ಸರ್ವೆಂಟ್ ಎಂದು ಹೇಳಿ, ಮೊಬೈಲ್ ನಂಬರ್ ಪಡೆದುಕೊಂಡಿದ್ದಾರೆ. ಬಳಿಕ ವಾಟ್ಸ್ ಆಪ್ ಗ್ರೂಪ್ ಮೂಲಕ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಡಿ. ರೂಪಾ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News