ಜ.7ರವರೆಗೆ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇ.10 ರಿಯಾಯಿತಿ

Update: 2020-12-25 16:00 GMT

ಬೆಂಗಳೂರು, ಡಿ.25: ಕರ್ನಾಟಕ ಹಾಲು ಮಹಾ ಮಂಡಳಿ(ಕೆಎಂಎಫ್) ವತಿಯಿಂದ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜ.7 ರವರೆಗೂ ನಂದಿನಿ ಸಿಹಿ ಉತ್ಪನ್ನಗಳ ಮಾರಾಟದ ಮೇಲೆ ಶೇ.10 ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ.

ಹೊಸ ವರ್ಷಕ್ಕೆ ಕೆಎಂಎಫ್ ಸಿಹಿ ಉತ್ಸವ ಆಚರಣೆ ಮಾಡಲಾಗುತ್ತಿದೆ. ಹೀಗಾಗಿ, ಜ.7 ರವರೆಗೂ ರಿಯಾಯಿತಿ ದರದಲ್ಲಿ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಮೈಸೂರು ಪಾಕ್, ಪೇಡಾ, ಧಾರವಾಡ ಪೇಡಾ, ಕೇಸರ್, ಏಲಕ್ಕಿ ಪೇಡ, ಬಾದಮ್, ಕ್ಯಾಶ್ಯೂ, ಕೋಕೋನಟ್/ಚಾಕೋಲೇಟ್/ಡ್ರೈಫ್ರೂಟ್ಸ್ ಬರ್ಫಿ, ಜಾಮೂನು, ರಸಗುಲ್ಲಾ ಜೊತೆಗೆ ಸಿರಿಧಾನ್ಯ ಲಡ್ಡು, ಸಿರಿಧಾನ್ಯ ಹಾಲಿನ ಪುಡಿ, ಚಕ್ಕಿ ಲಾಡು, ಸಿರಿಧಾನ್ಯ ಪಾಯಸ, ಸಿರಿಧಾನ್ಯ ಸಿಹಿ ಪೊಂಗಲ್, ಶ್ರೀಖಂಡ ಹಾಗೂ ಕುಕ್ಕೀಸ್‍ಗಳನ್ನು ಮಾರಾಟ ಮಾಡಲಾಗುತ್ತದೆ.

ಗ್ರಾಹಕರು ಎಲ್ಲಾ ನಂದಿನಿ ಪಾರ್ಲರ್ ಗಳು/ಮಳಿಗೆಗಳು, ಕ್ಷೀರ ಕೇಂದ್ರಗಳು, ಸೂಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್‍ ಗಳಲ್ಲಿ ನಂದಿನಿ ಸಿಹಿ ಉತ್ಪನ್ನಗಳು ಮತ್ತು ಚೀಸ್ ಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದಾಗಿದೆ.

ಕೆಎಂಎಫ್ ಕೇಂದ್ರ ಕಚೇರಿಯ ಆವರಣದಲ್ಲಿರುವ ನಂದಿನಿ ಪಾರ್ಲರ್ ನಲ್ಲಿ ನಂದಿನಿ ಈ ಉತ್ಸವಕ್ಕೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಚಾಲನೆ ನೀಡಿದರು. ರಾಯಚೂರು-ಬಳ್ಳಾರಿ ಹಾಲು ಒಕ್ಕೂಟ ಅಧ್ಯಕ್ಷ ಭೀಮಾನಾಯಕ್  ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ ನಂಜೇಗೌಡ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News